
Mangalore: ಅಂತರ್ ಕಾಲೇಜು ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ ‘ಗಾನ ರಥ-2024’
ಮಂಗಳೂರು: ಹಿರಿಯ ವಿದ್ಯಾರ್ಥಿಗಳ ಸಂಘ(ರಿ) ಡಾ. ಪಿ ದಯಾನಂದ ಪೈ ಪಿ ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇದರ ಹಿರಿಯ ವಿದ್ಯಾರ್ಥಿಗಳ ದಿನಾಚರಣೆಯ ಪ್ರಯುಕ್ತ ಜೂ.15 ರಂದು ‘ಗಾನ ರಥ-2024’ ಅಂತರ್ ಕಾಲೇಜು ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ ನಡೆಯಿತು.
ಈ ಸ್ಪರ್ಧೆಯಲ್ಲಿ ಮ್ಯಾಪ್ಸ್ ಕಾಲೇಜಿನ ವಿದ್ಯಾರ್ಥಿ ನಮನ್ ಎಸ್. ಪ್ರಥಮ ಸ್ಥಾನ, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಲ್ಮಠದ ವಿದ್ಯಾರ್ಥಿನಿ ಜಿ.ಎಲ್. ಚಂದನ ದ್ವಿತೀಯ ಸ್ಥಾನ ಹಾಗೂ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಹಂಪನಕಟ್ಟೆ ಮಂಗಳೂರು ಇಲ್ಲಿನ ವಿದ್ಯಾರ್ಥಿ ಅಖಿಲೇಶ್ ಜಿ.ಎಸ್. ತೃತೀಯ ಸ್ಥಾನವನ್ನು ಪಡೆದರು.
ಕಾರ್ಯಕ್ರಮವನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿ ಎದೆ ತುಂಬಿ ಹಾಡುವೆನು ಖ್ಯಾತಿಯ ಸಂದೇಶ ನೀರ್‌ಮಾರ್ಗ ಉದ್ಘಾಟಿಸಿದರು.
ಅನಾರ್ಕಲಿ ತುಳು ಸಿನಿಮಾದ ನಿರ್ದೇಶಕ ಹರ್ಷಿತ್ ಸೋಮೇಶ್ವರ, ಸೈಬರ್ ಕ್ರೈಂ ವಿಭಾಗದ ಪೊಲೀಸ್ ಕಾನ್‌ಸ್ಟೇಬಲ್ ಸುರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಎಂ. ಅವರು ವಹಿಸಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಸಂಯೋಜಕ ನಾಗರಾಜು ಎಮ್, ಕಾಲೇಜು ಸಾಂಸ್ಕೃತಿಕ ಸಂಯೋಜಕಿ ಡಾ. ಕೃಷ್ಣಪ್ರಭ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ದೀಪ್ತಿ ದಿಲ್ಸೆ, ಪ್ರಶಾಂತ್ ಕಂಕನಾಡಿ ಮತ್ತು ಕೆ.ಪಿ. ಮಿಲನ್ ಸಹಕರಿಸಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧೀರಜ್ ಕುಮಾರ್ ಸ್ವಾಗತಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ತುಷಾರ್ ಕೆ. ಕೋಟೆಕಾರ್ ವಾಚಿಸಿದರು. ಜೊತೆ ಕಾರ್ಯದರ್ಶಿ ಕುಮಾರ್ ವಿಟ್ಲ ವಂದಿಸಿದರು. ಕಾರ್ಯಕ್ರಮವನ್ನು ನಿಸಾರ್ ಅಹ್ಮದ್ ನಿರೂಪಿಸಿದರು. ಗಾನ ರಥ-2024 ಸ್ಪರ್ಧೆಯನ್ನು ಸಾಂಸ್ಕೃತಿಕ ಕಾರ್ಯದರ್ಶಿ ಮೋಹಿತ್ ಕುಮಾರ್ ಹಾಗೂ ಕುಮಾರ್ ವಿಟ್ಲ ನಡೆಸಿಕೊಟ್ಟರು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಡಾ. ಶೇಷಪ್ಪ ಕೆ., ಕಾಲೇಜು ಕ್ಯಾಂಟೀನ್ ಮಾಲಕ ಪದ್ಮನಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.