Mangalore: ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ವಿಶ್ವ ಯೋಗ ದಿನ-2024

Mangalore: ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ವಿಶ್ವ ಯೋಗ ದಿನ-2024


ಮಂಗಳೂರು: ಶಕ್ತಿ ವಸತಿ ಶಾಲೆ ಶಕ್ತಿ ನಗರ ಮಂಗಳೂರು ಇಲ್ಲಿನ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಶಕ್ತಿ ವಿದ್ಯಾ ಸಂಸ್ಥೆ ಮತ್ತು ಕ್ರೀಡಾ ಭಾರತಿ ಮಂಗಳೂರು ಇವರ ಸಹಯೋಗದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯನ್ನು ಸಾಮೂಹಿಕವಾಗಿ ವಿವಿಧ ಯೋಗಾಸನಗಳನ್ನು ಮಾಡುವ ಮೂಲಕ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಮನುಷ್ಯನಲ್ಲಿ ಯೋಗವು ಸ್ಮರಣ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ನಮ್ಮ ಆಲೋಚನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಈ ಯೋಗ ಬಹಳ ಪ್ರಯೋಜನಕಾರಿಯಾಗಿದೆ. ಅಷ್ಟೇ ಅಲ್ಲ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿ ಏಕಾಗೃತೆಯನ್ನು ಹೆಚ್ಚಿಸುವಲ್ಲಿ ಯೋಗ ಬಹಳ ಸಹಕಾರಿಯಾಗಿದೆ. ಯೋಗಕ್ಕೆ ಸಾಕಷ್ಟು ವರ್ಗಗಳ ಚರಿತ್ರೆಯಿದ್ದು, ಇಂದು ಇಡೀ ವಿಶ್ವವೇ ಯೋಗವನ್ನು ತನ್ನದಾಗಿಸಿಕೊಂಡು ಅಭ್ಯಾಸ ಮಾಡುತ್ತಿದೆ. ನಾವು ನಮ್ಮ ದಿನನಿತ್ಯದ ಬದುಕಿನಲ್ಲಿ ಈ ಯೋಗಾಸನಗಳನ್ನು ಮಾಡುತ್ತಾ ನಾವೆಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದು ಹೇಳುತ್ತಾ ವಿದ್ಯಾರ್ಥಿಗಳಿಂದ ವಿವಿಧ ಪ್ರಾಣಯಾಮಗಳನ್ನು ಅಭ್ಯಾಸ ಮಾಡಿಸುವ ಮೂಲಕ ಯೋಗಾಸನಗಳ ಮಾಡುವ ಉದ್ದೇಶವನ್ನು ಇಂದಿರಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್ ಮಂಗಳೂರಿನ ಸಹಾಯಕ ಪ್ರಾದ್ಯಾಪಕಿ ಡಾ. ಐಶ್ವರ್ಯ ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್‌ಮೂರ್ತಿ ಹೆಚ್. ಅವರು ಮಾತನಾಡಿ, ಮನುಷ್ಯ ನಾಗರೀಕತೆಯನ್ನು ಕಲಿಯುತ ಹೋದ ಹಾಗೆ ಈ ಯೋಗಾಸನವನ್ನು ರೂಢಿಸಿಕೊಳ್ಳುತ್ತಾ ಬಂದಿದ್ದಾನೆ. ಪತಂಜಲಿ ಯೋಗವು ಮಾನಸಿಕ ಆರೋಗ್ಯದ ಸ್ಥಿರತೆಯನ್ನು ವೃದ್ಧಿಸುತ್ತದೆ. ಮಕ್ಕಳ ಮನಸ್ಸು ಪಠ್ಯಗಳಲ್ಲಿರಬೇಕಾದರೆ ಯೋಗಾಸನ ಬಹಳ ಮುಖ್ಯ. ಉತ್ತಮ ಆರೋಗ್ಯಕ್ಕಾಗಿ ನಾವೆಲ್ಲರೂ ಯೋಗಾಸನವನ್ನು ಅಭ್ಯಾಸ ಮಾಡಬೇಕು. ಇಂದು ಇಡೀ ವಿಶ್ವವೇ ಈ ಯೋಗ ದಿನವನ್ನು ಆಚರಿಸುತ್ತಿದೆ. ಮಕ್ಕಳಿಗೆ ಇದು ಕಲಿಯುವ ಸಮಯ ಆದ್ದರಿಂದ ಪತಂಜಲಿ ಯೋಗವು ತಿಳಿಸಿದ ವಿವಿಧ ಯೋಗಾಸನಗಳನ್ನು ದಿನ ನಿತ್ಯ ಕಲಿಯುತ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.

ನಂತರ ಕ್ರೀಡಾಭಾರತಿ ಮಂಗಳೂರು ಇದರ ಪದಾಧಿಕಾರಿಗಳಾದ ಸುಭದ್ರಾ ಮತ್ತು ವೀಣಾ ಅವರಿಂದ ಮಕ್ಕಳಿಗೆ ಸಾಮೂಹಿಕವಾಗಿ ಯೋಗ ತರಬೇತಿ ನಡೆಯಿತು.

ಈ ಕಾರ್ಯಕ್ರಮದ ವೇದಿಕೆಯಲ್ಲಿ ಕ್ರೀಡಾಭಾರತಿ ಮಂಗಳೂರು ಇದರ ಕಾರ್ಯದರ್ಶಿಗಳಾದ ಕೃಷ್ಣ ಶೆಟ್ಟಿ ತಾರೆಮಾರ್, ಯೋಗ ತರಬೇತುದಾರರಾದ ಸುಭದ್ರಾ ಮತ್ತು ವೀಣಾ, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕ್ರೀಡಾ ಭಾರತಿ ಮಂಗಳೂರು ಇದರ ಅಧ್ಯಕ್ಷರಾದ ಕರಿಯಪ್ಪ ರೈ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಸ್ವಾಗತಿಸಿದರು, ಶಕ್ತಿ ವಸತಿ ಶಾಲಾ ಪ್ರಾಂಶುಪಾಲೆ ಬಬಿತಾ ಸೂರಜ್ ವಂದಿಸಿ, ಕಾರ್ಯಕ್ರಮವನ್ನು ಕನ್ನಡ ಅಧ್ಯಾಪಕ ಶರಣಪ್ಪ ನಿರೂಪಿಸಿದರು.




















Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article