Mangalore: ವಿದ್ಯಾರ್ಥಿಗಳಿಂದಲೇ ಪರಿಸರ ಜಾಗೃತಿ: ಅರುಣಾ
Friday, June 7, 2024
ಮಂಗಳೂರು: ವಿದ್ಯಾರ್ಥಿಗಳಿಂದಲೇ ಪರಿಸರ ಜಾಗೃತಿ ಆಗಬೇಕು. ಗೆಳೆಯ ಗೆಳತಿಯರೊಂದಿಗೆ ಸೇರಿಕೊಂಡು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಾಯಕವೆಂದು ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಅರುಣಾ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಲೇಜಿನ ಗ್ರಂಥಾಲಯದಲ್ಲಿ ಗ್ರಂಥಾವಲೋಕನ ಮತ್ತು ಹಾಗೂ ಪುಸ್ತಕ ವಿಮರ್ಶೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಐಕ್ಯುಎಸಿ ಸಂಯೋಜಕ ಹಾಗೂ ಸಸ್ಯಶಾಸ್ತ್ರ ವಿಭಾಗದ ಡಾ. ಸಿದ್ದರಾಜು ಎಂ.ಎನ್., ಪರಿಸರವನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕಿದೆ. ಪರಿಸರದ ಪ್ರತಿ ಜೀವರಾಶಿಗೂ ಜೀವವಿದೆ. ಆದರೆ ಗಮನಿಸುವ ಸೂಕ್ಷ್ಮ ಮನಸ್ಸನ್ನು ಬೆಳೆಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಅಂತಿಮ ಬಿಎಸ್ಸಿ ವಿದ್ಯಾರ್ಥಿನಿ ಸ್ವಾತಿ ನಾಯಕ್ ಹಾಗೂ ಪ್ರಥಮ ವರ್ಷದ ಅನಿತಾ ಪರಿಸರ ಸಂರಕ್ಷಣೆ ಕುರಿತಂತೆ ಜಾಗೃತಿ ಮೂಡಿಸಿದರು. ಗ್ರಂಥಪಾಲಕಿ ಡಾ. ವನಜಾ, ಕಚೇರಿ ಅಧೀಕ್ಷಕಿ ಭಾಗ್ಯ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.