
Mangalore: ವೆಟ್‌ವೆಲ್‌ಗೆ ಅಪಾಯವಾಗದಂತೆ ಎಚ್ಚರಿಕೆ ವಹಿಸಲು ಶಾಸಕ ಡಾ. ಭರತ್ ಶೆಟ್ಟಿ ಸೂಚನೆ
Thursday, June 27, 2024
ಮಂಗಳೂರು: ಕರ್ನಾಟಕ ಅರ್ಬನ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಆಂಡ್ ಫೈನಾನ್ಸ್ ಕಾರ್ಪೊರೇಶನ್(ಕೆಯುಐಡಿಎಫ್‌ಸಿ) ಮೂಲಕ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ತಿರುವೈಲು ವಾರ್ಡ್‌ನಲ್ಲಿ ನಿರ್ಮಿಸುತ್ತಿರುವ ವೆಟ್‌ವೆಲ್ ಪ್ರಾಜೆಕ್ಟ್‌ಗೆ ಕೆತ್ತಿಕಲ್ ಗುಡ್ದದ ಮಣ್ಣುಗಾರಿಕೆಯಿಂದ ಅಪಾಯ ಎದುರಾಗಿದ್ದು, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಜೂ. ೨೬ರಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವೆಟ್‌ವೆಲ್‌ಗೆ ಅಪಾಯವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದರು.
ಕೆಯುಐಡಿಎಫ್‌ಸಿ ಕಾರ್ಯಕಾರಿ ಇಂಜಿನಿಯರ್ ಸುರೇಶ್, ಎಡಬ್ಲ್ಯೂ ವೆಂಕಟರಮಣ, ಕನ್ಸಲ್ಟೆಂಟ್ ಜಯಪ್ರಕಾಶ್, ಯೋಜನೆಯ ಗುತ್ತಿಗೆದಾರ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.