Mangalore: ಅನಧಿಕೃತ ಗೂಡಂಗಡಿಗಳ ತೆರವಿಗೆ ಮೇಯರ್ ಆದೇಶ

Mangalore: ಅನಧಿಕೃತ ಗೂಡಂಗಡಿಗಳ ತೆರವಿಗೆ ಮೇಯರ್ ಆದೇಶ


ಮಂಗಳೂರು: ಸಾರ್ವಜನಿಕರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಫೂಟ್‌ಪಾತ್‌ಗಳನ್ನು ನಿರ್ಮಿಸಿದ್ದು, ಆ ಸ್ಥಳಗಳನ್ನು ಗೂಡಂಗಡಿಗಳು ನಿರ್ಮಿಸಿಕೊಂಡಿದ್ದು, ಇದರಿಂದ ಸಾರ್ವಜನಿಕರಿಗೆ ನಡೆದಾಡಲು ತೊಂದರೆಯಾಗುತ್ತಿದೆ ಇದನ್ನು ಶೀಘ್ರವಾಗಿ ತೆರವುಗೊಳಿಸಲು ಅಧಿಕಾರಿಗಳಿಗೆ ಆದೇಶ ನೀಡಲಾಗುವುದು ಎಂದು ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.

ಅವರು ಫೋನ್ ಇನ್ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಫೋನ್ ಇನ್ ವೇಳೆ ರಸ್ತೆ ಬದಿಗಳಲ್ಲಿನ ಅನಧಿಕೃತ ಗೂಡಂಗಡಿಗಳ ಬಗ್ಗೆ ಹಲವು ದೂರುಗಳು ಸಾರ್ವಜನಿಕರಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.

ನಗರದ ಹಲವೆಡೆ ಫಾಸ್ಟ್ ಫುಡ್‌ಗಳಲ್ಲಿ ಬಳಸುವ ಖಾದ್ಯ ತೈಲ, ನೀರು ಸರಿ ಇಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಅಧಿಕಾರಿಗಳ ಮೂಲಕ ದಾಳಿ ನಡೆಸಿ ತೆರವಿಗೆ ಕ್ರಮ ವಹಿಸಲಾಗುವುದು. ಪ್ರತಿ ವಾರ್ಡ್ನಲ್ಲಿರುವ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ವಾರ್ಡ್‌ಗಳಲ್ಲಿ ಲಭ್ಯ ಇರುವ ಸರಕಾರಿ ಜಾಗದಲ್ಲಿ ವೆಂಡಿಂಗ್ ಝೋನ್ (ವ್ಯಾಪಾರ ವಲಯ)ಗಳನು ಗುರುತಿಸಿ ಅಲ್ಲಿಗೆ ವ್ಯಾಪಾರ ಸ್ಥಳಾಂತರಿಸಲು ಕ್ರಮ ವಹಿಸಲಾಗುವುದು. ಸ್ಥಳಾಂತರ ಆಗದವರಿಗೆ ಕಾನೂನು ಕ್ರಮ ವಹಿಸುವುದಾಗಿ ಮೇಯರ್ ಹೇಳಿದರು.

ನಗರದಲ್ಲಿ ಪ್ಲಾಸ್ಟಿಕ್ ಫ್ಲಕ್ಸ್‌ಗಳು ಹೆಚ್ಚಾಗಿ ಕಂಡುಬುತ್ತಿದ್ದು, ಧಾರ್ಮಿಕ ವಿಚಾರಕ್ಕೆ ಹಾಗೂ ರಾಜಕೀಯ ನಾಯಕರುಗಳ ವಿಚಾರದಲ್ಲಿ ಪ್ಲಾಸ್ಟಿಕ್ ಫ್ಲಕ್ಸ್‌ಗಳನ್ನು ಉಪಯೋಗಿಸುತ್ತಿದ್ದು, ಅದರ ಬದಲಿಗೆ ಹೋಲ್ಡಿಂಗ್ಸ್‌ಗಳನ್ನು ಬಳಸುವಂತೆ ಮನವಿ ಮಾಡಿಕೊಂಡರು.

ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಇದ್ದು, ಸದಕ್ಕಾಗಿ ಪಿಪಿಪಿ ಮಾದರಿಯಲ್ಲಿ ಪೇ ಪಾರ್ಕಿಂಗ್ ನಿರ್ಮಾಣ ಮಾಡುತ್ತಿದ್ದು, ಗುತ್ತಿಗೆದಾರರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಾನವೀಯತೆ ದೃಷ್ಟಿಯಿಂದ ಕಾಮಗಾರಿಯನ್ನು ಸಧ್ಯಕ್ಕೆ ನಿಲ್ಲಿಸಿದ್ದು, ಗುಣಮುಖರಾದಮೇಲೆ ಮುಂದುವರಿಸಲಾಗುವುದು ಅವರಿಂದ ಆಗದಿದ್ದರೆ ಅದನ್ನು ಟರ್ಮಿನೇಟ್ ಮಾಡಿ ಹೊಸ ಟೆಂಡರ್ ಕರೆಯಲಾಗುವುದು ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷರಾದ ವರುಣ್ ಚೌಟ, ಲೋಹಿತ್ ಅಮೀನ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article