Mangalore: ಜನಾದೇಶವನ್ನು ವಿನಮ್ರವಾಗಿ ಸ್ವೀಕರಿಸುತ್ತೇವೆ: ಮಂಜುನಾಥ ಭಂಡಾರಿ
Wednesday, June 5, 2024
ಮಂಗಳೂರು: ದೇಶದ ಜನತೆ ನೀಡಿದ ಜನಾದೇಶವನ್ನು ವಿನಮ್ರವಾಗಿ ಸ್ವೀಕರಿಸುತ್ತೇವೆ. ದೇಶದ ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಜನತೆಯ ತೀರ್ಪು ಬಂದಿದೆ.
ಮತದಾರರು ಸರ್ವಾಧಿಕಾರವನ್ನು ತಿರಸ್ಕರಿಸಿದ್ದಾರೆ. ಆ ಮೂಲಕ ಸಂವಿಧಾನ ಗೆದ್ದಿದೆ. ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಮತದಾರರು ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗ ಗೆಲುವಿಗೆ ಹಗಲಿರುಲು ಶ್ರಮಿಸಿರುವ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆಗಳು. ನಾವೆಲ್ಲರೂ ಸೇರಿ ಜಾತ್ಯಾತೀತ ಮೌಲ್ಯವನ್ನು ಉಳಿಸಿಕೊಂಡು ಸಮೃಧ ಭಾರತ ಕಟ್ಟಲು ಶ್ರಮಿಸೋಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.