Mangalore: ಮೋದಿಯವರ ಮಾರ್ಗದರ್ಶನದಲ್ಲಿ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಶ್ರಮ ವಹಿಸುತ್ತೇನೆ: ಕ್ಯಾ. ಬ್ರಿಜೇಶ್ ಚೌಟ
Wednesday, June 5, 2024
ಮಂಗಳೂರು: ಹಿಂದುತ್ವಕ್ಕೆ ಬದ್ಧತೆ ಇಟ್ಟುಕೊಂಡು, ಅಭಿವೃದ್ಧಿಯನ್ನು ಆದ್ಯತೆಯಾಗಿಸಿಕೊಂಡು ಕಾರ್ಯಕರ್ತರ ಸಹಕಾರ ಪಡೆದು, ಹಿರಿಯರ ಮಾರ್ಗದರ್ಶನ, ನರೇಂದ್ರ ಮೋದಿಯವರ ಪ್ರೇರಣೆ ಹಾಗೂ ಮಾರ್ಗದರ್ಶನದೊಂದಿಗೆ ಜಿಲ್ಲೆಯನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಪೂರ್ಣ ಶ್ರಮ ವಹಿಸುತ್ತೇನೆ.
ಇದು ಕಾರ್ಯಕರ್ತರು, ಹಿಂದುತ್ವ, ಪಕ್ಷದ ಜಯವಾಗಿದೆ. ಹಿಂದುತ್ವಕ್ಕೆ ಬದ್ದತೆ, ಅಭಿವೃದ್ದಿಗೆ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ. ಸತ್ಯ ಧರ್ಮ, ನ್ಯಾಯದ ಆಧಾರದಲ್ಲಿ ಈ ಚುನಾವಣೆಯನ್ನು ಎದುರಿಸಿದ್ದೆವು. ತುಳುನಾಡಿನ ಮಣ್ಣು ಸತ್ಯ ಧರ್ಮ ನ್ಯಾಯಕ್ಕೆ ಯಾವತ್ತೂ ಗಟ್ಟಿಯಾಗಿ ನಿಂತಿದೆ. ಸತ್ಯ ಧರ್ಮದ ನ್ಯಾಯದ ಜಯ ಆಗಿದೆ ಎಂದು ಭಾವಿಸುತ್ತೇನೆ ಎಂದು ದ.ಕ. ಲೋಕಸಭಾ ಕ್ಷೇತ್ರದ ಬಿಜೆಫಿ ಗೆದ್ದ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.