Mangalore: ಗೋ ಹತ್ಯೆ ನಿಷೇಧ ಕಟ್ಟು ನಿಟ್ಟಾಗಿ ಜಾರಿ ಮಾಡಬೇಕು: ಡಾ. ಭರತ್ ಶೆಟ್ಟಿ ವೈ

Mangalore: ಗೋ ಹತ್ಯೆ ನಿಷೇಧ ಕಟ್ಟು ನಿಟ್ಟಾಗಿ ಜಾರಿ ಮಾಡಬೇಕು: ಡಾ. ಭರತ್ ಶೆಟ್ಟಿ ವೈ


ಮಂಗಳೂರು: ಬಕ್ರಿದ್ ಬಂದರೆ ಗೋ ಸಾಕಾಣಿಕೆ ಮಾಡಿ ಜೀವನ ನಡೆಸುವವರು ಆತಂಕಗೊಳ್ಳುವ ಸ್ಥಿತಿಯಿದ್ದು, ಗೋ ಹತ್ಯೆ ನಿಷೇಧ ಕಟ್ಟು ನಿಟ್ಟಾಗಿ ಜಾರಿ ಮಾಡಬೇಕು. ಅಕ್ರಮವಾಗಿ ಕದ್ದು ತಂದ ಗೋವು ಕಡಿಯುವುದು ಕಂಡು ಬಂದರೆ ಆಸ್ತಿ ಮಟ್ಟುಗೋಲು ಹಾಕಿಕೊಳ್ಳಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ. 

ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ 1959, ಜತೆಗೆ ಬಿಜೆಪಿ ಸರಕಾರ ಮಾಡಿದ ಬಿಗಿ ಕಾನೂನು ಈಗಾಗಲೇ ಜಾರಿಯಲ್ಲಿದೆ. ಕುರ್ಬಾನಿ ನೆಪದಲ್ಲಿ ಅಕ್ರಮವಾಗಿ ದನ ಸಾಗಾಟ, ಹತ್ಯೆ ವಿರುದ್ಧಗಸ್ತು ಹೆಚ್ಚಿಸಬೇಕು. ನಾಕಾ ಬಂದಿ ನಡೆಸಬೇಕು. ಪೊಲೀಸ್ ಇಲಾಖೆ ಧ್ವನಿ ವರ್ದಕದ ಮೂಲಕ ಎಚ್ಚರಿಕೆ ಸಂದೇಶ ರವಾನಿಸಬೇಕು. ಈ ಮೂಲಕ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ, ಹೈನುಗಾರರಿಗೆ ನಷ್ಟವಾಗದಂತೆ ಎಚ್ಚರವಹಿಸಬೇಕು. ಶಾಂತಿ ಸೌಹಾರ್ಧತೆ ಬಗ್ಗೆ ಮಾತನಾಡುವ ಈಗಿನ ಸರಕಾರ ಈ ಬಗ್ಗೆ ಸೂಕ್ತ ಕ್ರಮಗೊಳ್ಳುತ್ತದೆ ಎಂದು ಬಾವಿಸಿದ್ದೇನೆ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article