
Mangalore: ಕುತ್ತಾರಿನಲ್ಲಿ ನಡೆದ ಪ್ರಕರಣ-ಸಂಸದ ಚೌಟರಿಂದ ಸಂತಾಪ
Thursday, June 27, 2024
ಮಂಗಳೂರು: ಕುತ್ತಾರಿನಲ್ಲಿ ಜೂ.26 ರಂದು ಮುಂಜಾನೆ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಅತ್ಯಂತ ದುರದೃಷ್ಟಕರ. ಈ ಘಟನೆಯಲ್ಲಿ ಮಡಿದವರ ಆತ್ಮಕ್ಕೆ ಸದ್ದತಿಯನ್ನು ಕೋರುತ್ತೇನೆ.
ನಾನು ಲೋಕಸಭಾ ಅಧಿವೇಶನದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿರುವ ಕಾರಣ ಕುತ್ತಾರಿನ ಘಟನೆಯ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ತುರ್ತು ಸ್ಪಂದಿಸುವಂತೆ ತಿಳಿಸಿದ್ದು, ದೆಹಲಿಯಿಂದ ಆಗಮಿಸಿದ ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದೇನೆ.
ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು ಜಿಲ್ಲೆಯ ಜನರು ವಿಶೇಷವಾಗಿ ಮೀನುಗಾರರು, ನದಿ ಪಾತ್ರದ ಜನರ ಹಾಗೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಎಚ್ಚರ ವಹಿಸುವಂತೆ ವಿನಂತಿಸುತ್ತೇನೆ.
ಪ್ರಾಕೃತಿಕ ವಿಕೋಪದ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಮುನ್ನೆಚ್ಚರಿಕೆಯ ಕ್ರಮವನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿರುತ್ತೇನೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.