
Manjeswara: ರಸ್ತೆ ಬದಿ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ಬಿಜೆಪಿ ಅಗ್ರಹ
ಮಂಜೇಶ್ವರ: ಮಂಜೇಶ್ವರ, ವರ್ಕಾಡಿ, ಪೈವಳಿಕೆ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಬದಿಗಳಲ್ಲಿ, ಒಳರಸ್ತೆಗಳಲ್ಲಿ, ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ಎಸೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಗ್ರಹಿಸಿದೆ.
ಅವರು ಜೂ.27 ರಂದು ಮಂಜೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಈ ಕುರಿತು ಆಗ್ರಹ ಕೇಳಿ ಬಂತು.
ಪರಿಸರ ನಾಶ ಮಾಡುವವರ ವಿರುದ್ಧ, ಜನತೆಯನ್ನು ಅನಾರೋಗ್ಯಕ್ಕೆ ತಳ್ಳುವ, ಸ್ವಚ್ಛತೆಗೆ ಮಾನ್ಯತೆ ನೀಡದ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಸಿ.ಸಿ ಕ್ಯಾಮೆರಾ ಸ್ಥಾಪಿಸುವಂತೆ ಬಿಜೆಪಿ ಕೇರಳ ಸರಕಾರವನ್ನು ಆಗ್ರಹಿಸಿದೆ. ಮತ್ತು ಎಸೆಯುವವರ ಮಾಹಿತಿ ನೀಡುವವರಿಗೆ ಪಂಚಾಯತ್ ಪಾರೀತೋಷಕ ನೀಡಬೇಕೆಂದು ಬಿಜೆಪಿ ಸಲಹೆ ಮಾಡಿದೆ.
ಹಿಂದೂ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ಸಮೀಪದಲ್ಲೇ ತ್ಯಾಜ್ಯಗಳನ್ನು ಉದ್ದೇಶ ಪೂರ್ವಕ ಎಸೆಯಲಾಗುವ ಆರೋಪಗಳು ಬಂದಿದೆ. ಪಂಚಾಯತ್ ಅಥವಾ ಜನಪ್ರತಿನಿಧಿಗಳು ಸ್ವಚ್ಛ ಮಾಡಿದರೆ ಮರುದಿನದಿಂದಲೇ ಮತ್ತೆ ಮತ್ತೆ ತ್ಯಾಜ್ಯ ಎಸೆಯುವವರ ಬಗ್ಗೆ ನಿಗಾ ಇರಿಸಿ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡಲು ಬಿಜೆಪಿ ಅಗ್ರಹಿಸಿದೆ.
ಸ್ವಚ್ಛ ಭಾರತ್ ಅಭಿಯಾನ ಯಶಸ್ವಿ ಆಗಬೇಕು ಅದನ್ನು ಉದ್ದೇಶ ಪೂರ್ವಕ ನಾಶ ಮಡಲು ಪ್ರಯತ್ನ ಮಾಡುವ ಕಿಡಿಗೇಡಿಗಳನ್ನು, ಪತ್ತೆ ಮಾಡಬೇಕು ಎಂದು ಬಿಜೆಪಿ ತಿಳಿಸಿದೆ. ಬಿಜೆಪಿ ಮಂಜೇಶ್ವರ ಮಂಡಲ ಸಭೆಯಲ್ಲಿ ಈ ವಿಚಾರದ ಬಗ್ಗೆ ಜನಪ್ರತಿನಿಧಿನಗಳು ಪ್ರಸ್ತಾವಿಸಿ, ಚರ್ಚಿಸಿದರು.
ಆದರ್ಶ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಮಣಿಕಂಠ ರೈ, ಯಾದವ ಬಡಾಜೆ, ಹರಿಶ್ಚಂದ್ರ ಮಂಜೇಶ್ವರ, ರಕ್ಷನ್ ಅಡಕಳಕಟ್ಟೆ, ಕೆ.ವಿ. ಭಟ್, ಎ.ಕೆ ಕೈಯ್ಯಾರ್, ಸುಬ್ರಮಣ್ಯ ಭಟ್ ಆಟಿಕುಕ್ಕೆ ಮತ್ತಿತರರು ಉಪಸ್ಥಿತರಿದ್ದರು. ಯತೀರಾಜ್ ಶೆಟ್ಟಿ ಸ್ವಾಗತಿಸಿ, ಚಂದ್ರಹಾಸ ಕಡಂಬಾರ್ ವಂದಿಸಿದರು.