
Manjeswara: ಧಾರಕಾರ ಮಳೆ-ನೆಲಕ್ಕುರುಳಿದ ಮರ, ವಿದ್ಯುತ್ ತಂತಿ ಕಡಿದ
Thursday, June 27, 2024
ಮಂಜೇಶ್ವರ: ಮಂಗಳವಾರ ಸಂಜೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಂಜೇಶ್ವರದ ವಿವಿಧ ಕಡೆಗಳಲ್ಲಿ ಮರಗಳು ಉರುಳಿ ವಿದ್ಯುತ್ ಕಂಬಗಳು ದಾರಶಾಯಿಯಾಗಿವೆ.
ವಿವಿಧ ಕಡೆಗಳಲ್ಲಿ ಹಾನಿಗಳು ಸಂಭವಿಸಿವೆ. ಇದೀಗ ಮಂಜೇಶ್ವರ ವಿದ್ಯುತ್ ಇಲಾಖೆ ಮುರಿದು ಬಿದ್ದ ಕಂಬಗಳನ್ನು ವಿದ್ಯುತ್ ತಂತಿಗಳನ್ನು ಬದಲಿಸಿ ದುರಸ್ತಿಗೊಳಿಸುವ ಕಾರ್ಯದಲ್ಲಿ ತೊಡಗಿದೆ. ಹೊಸಂಗಡಿ ರೈಲ್ವೆ ಗೇಟ್ ನಲ್ಲಿ ರೈಲ್ವೆ ಇಲಾಖೆಯ ಸೈರನ್ ಕಂಬ, ಹೊಸಂಗಡಿ ಆನೆ ಕಲ್ಲು ರಸ್ತೆಯ ಪರಿಸರದಲ್ಲಿ ಮರಗಳು ವಿದ್ಯುತ್ ಕಂಬಕ್ಕೆ ಬಿದ್ದು ಹಾನಿ, ಅಂಗಡಿ ಪದವಿನಲ್ಲಿ ಬೃಹತ್ ಮರ ಧರೆಗುರುಳಿದೆ.