
Manjeswara: ನೀರಿನಲ್ಲಿ ಮುಳುಗಿ ಹೋದ ಮೇಲೆನಾಡು ಹೈವೆ-ವರ್ಕಾಡಿಯಲ್ಲಿ ನೀರಿನಲ್ಲಿ ಮುಳುಗಿದ ರಸ್ತೆ
Thursday, June 27, 2024
ಮಂಜೇಶ್ವರ: ಇಲ್ಲಿನ ವಿದ್ಯಾನಗರ-ನಂದರಪದವು ಮಲೆನಾಡು ಹೈವೆ ಹಾದುಹೋಗುವ ವರ್ಕಾಡಿ ಸುಂಕದಕಟ್ಟೆ ಜಂಕ್ಷನ್ ಸಮೀಪದ ಬಸ್ಸು ನಿಲ್ದಾಣದ ಸಮೀಪ ಡ್ರೈನೇಜ್ ಬ್ಲಾಕ್ ಆಗಿದ್ದು ಇದೀಗ ಹೊಸಂಗಡಿ ಕಡೆ ಪ್ರಯಾಣಿಸುವ ಪ್ರಯಾಣಿಕರು ಈ ಕೊಳಚೆ ನೀರಿನಿಂದ ಭಾರೀ ಸಂಕಷ್ಟಕ್ಕಿಡಾಗಿದ್ದಾರೆ.
ವರ್ಕಾಡಿ ಪಂಚಾಯತ್ ಸಮೀಪದಲ್ಲೇ ಈ ಬಸ್ ನಿಲ್ದಾಣವಿದ್ದು ಈ ಅನಾಸ್ಥೆಯನ್ನು ಕಂಡು ಕೆಲವು ಅಧಿಕೃತರು ಕಣ್ಣಿದ್ದು ಕುರುಡರಂತೆ ನಟಿಸುತ್ತಿರುವುದಾಗಿ ಪ್ರಯಾಣಿಕರು ಆರೋಪಿಸಿದ್ದಾರೆ. ಮಲೆನಾಡು ಹೆದ್ದಾರಿಯ ಕಾಮಾಗಾರಿಯನ್ನು ಕೆ.ಕೆ ಬಿಲ್ಡಿರ್ಸ್ ಕಂಪೆನಿ ನಡೆಸಿದ್ದು, ಕಳಪೆ ಕಾಮಾಗಾರಿಯೇ ಈ ದುಸ್ಥಿತಿಗೆ ಕಾರಣ ಎನ್ನಲಾಗಿದೆ. ಈ ಬಸ್ ನಿಲ್ದಾಣದ ಮೂಲಕ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಮಹಿಳೆಯರು ಪ್ರಯಾಣಿಸುತ್ತಿದ್ದು ಭಾರೀ ತೊಂದರೆಗೊಳಗಾಗುತ್ತಿದ್ದು, ಈ ಬಸ್ ನಿಲ್ದಾಣದ ಸಮೀಪ ವರ್ಕಾಡಿ ಪಂ. ಕಚೇರಿ, ಮೃಗಾಸ್ಪತ್ರೆ, ಕೃಷಿ ಕಚೇರಿ ಕಾರ್ಯಚರಿಸುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳೂ ಕೂಡಲೇ ಈ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ನಾಗರೀಕರು ಒತ್ತಾಯಿಸಿದ್ದಾರೆ.