Moodubidire: ಮೂಡುಬಿದಿರೆ ಲೆಕ್ಸಾ ಸಂಸ್ಥೆಗೆ `ಹೈ-ಎಂಡ್ ಲೈಟಿಂಗ್ ಸೊಲ್ಯೂಷನ್ ಅವಾಡ್೯-2024'

Moodubidire: ಮೂಡುಬಿದಿರೆ ಲೆಕ್ಸಾ ಸಂಸ್ಥೆಗೆ `ಹೈ-ಎಂಡ್ ಲೈಟಿಂಗ್ ಸೊಲ್ಯೂಷನ್ ಅವಾಡ್೯-2024'


ಮೂಡುಬಿದಿರೆ: ಅಯೋಧ್ಯಾ ಧಾಮ್ ಹಾಗೂ ಬೆಳಗಾವಿ ಸುವರ್ಣ ವಿಧಾನ ಸೌಧವನ್ನು ಪರ್ಮನೆಂಟ್ ಲೈಟಿಂಗ್ ಮೂಲಕ ಶೃಂಗಾರಗೊಳಿಸಿ ದೇಶ ಹಾಗೂ ರಾಜ್ಯದಾದ್ಯಂತ ಹೆಸರುವಾಸಿಯಾಗಿದ್ದ ಮೂಡುಬಿದಿರೆಯ ಲೆಕ್ಸಾ ಸಂಸ್ಥೆಗೆ ಮುಂಬೈಯಲ್ಲಿ ಬಾಂಬೆ ಎಕ್ಸಿಬಿಷನ್ ಸೆಂಟರ್‌ನಲ್ಲಿ ನಡೆದ ಭಾರತದ ಅತಿದೊಡ್ಡ ಸೌಂಡ್ ಆಂಡ್ ಲೈಟ್ ಎಕ್ಸಿಬಿಷನ್-ಪಲ್ಮಾ ಎಕ್ಸಪೋ-2024ನಲ್ಲಿ ಹೈ-ಎಂಡ್ ಲೈಟಿಂಗ್ ಸೊಲ್ಯೂಷನ್ ಅವಾಡ್೯- 2024 ದೊರಕಿದೆ.

ಅವಾರ್ಡ್ ಅನ್ನು ಲೆಕ್ಸಾ ಸಂಸ್ಥೆಯ ಸಂಸ್ಥಾಪಕ, ಕಾರ್ಯನಿರ್ವಾಹಕ ನಿರ್ದೇಶಕ ರೊನಾಲ್ಡ್ ಸಿಲ್ವನ್ ಡಿಸೋಜ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಸ್ವೀಕರಿಸಿದರು.

ಈ ಪ್ರಶಸ್ತಿಯನ್ನು ಬಾರತ ದೇಶದಲ್ಲಿಯೇ ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ಉತ್ಕೃಷ್ಟ ದರ್ಜೆಯ ಲೈಟಿಂಗ್ ಸೊಲ್ಯೂಷನ್ಸ್ ಹಾಗೂ ಎಕ್ಸಿಕುಶನ್‌ಗಳನ್ನು ಮಾಡುತ್ತಿರುವ ಲೆಕ್ಸಾ ಸಂಸ್ಥೆಗೆ ನೀಡಲಾಗಿದೆ ಇದು ಮಂಗಳೂರಿಗೆ ಕರಾವಳಿಗೆ ಒಂದು ಹೆಮ್ಮೆಯ ಪ್ರಶಸ್ತಿಯಾಗಿದೆ.

ಕರ್ನಾಟಕದ ಮಂಗಳೂರು ಸಮೀಪದ ಮೂಡುಬಿದಿರೆಯ ಅಶ್ವತಪುರ ಎಂಬ ಗ್ರಾಮದಲ್ಲಿ ಇರುವ ಲೆಕ್ಸಾ ಲೈಟಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಜಪಾನೀಸ್ ಸಂಸ್ಕೃತಿ ಮತ್ತು ಉತ್ಪಾದನಾ ವ್ಯವಸ್ಥೆಯನ್ನು ತನ್ನ ಮೂಲದಲ್ಲಿ ಅಳವಡಿಸಿಕೊಂಡು  ಸ್ಥಳೀಯ 300ಕ್ಕೂ ಹೆಚ್ಚು ಉತ್ಸಾಹಿ ಯುವಕರ ತಂಡದೊಂದಿಗೆ ಮುನ್ನಡೆಯುತ್ತಿದೆ.

ಲೆಕ್ಸಾ ಸಂಸ್ಥೆ ಉತ್ಪನ್ನಗಳು ಮೇಕ್ ಇನ್ ಇಂಡಿಯಾ ತತ್ವವನ್ನು ಸಾಕಾರಗೊಳಿಸುತ್ತಿವೆ. ಸಂಶೋಧನೆ ಮತ್ತು ಅಭಿವೃದ್ಧಿ, ಪರಿಕಲ್ಪನೆ, ಕಚ್ಚಾ ವಸ್ತುಗಳನ್ನು ಪಡೆಯುವುದು, ಯೋಜನೆ, ವಿನ್ಯಾಸ, ಉತ್ಪಾದನೆ ಮತ್ತು ವಿತರಣೆ ಮತ್ತು ಸ್ಥಾಪನೆಯಿಂದ, ಅವರು ತಮ್ಮ ಸ್ವಂತ ಕಾರ್ಖಾನೆಯಲ್ಲಿ 400ಕ್ಕೂ ಹೆಚ್ಚು ವಿಶೇಷ ಬೆಳಕಿನ ಉತ್ಪನ್ನಗಳನ್ನು ಉತ್ಪಾದಿಸುತ್ತಾರೆ.

*2018ರಲ್ಲಿ ದುಬೈನಲ್ಲಿ ಇಂಟರ್ನ್ಯಾಷನಲ್ ಅಚೀವರ್ಸ್ ಕೌನ್ಸಿಲ್‌ನಿಂದ `ವೇಗವಾಗಿ ಬೆಳೆಯುತ್ತಿರುವ ಭಾರತೀಯ ಕಂಪನಿ ಶ್ರೇಷ್ಠತೆ ಪ್ರಶಸ್ತಿ' 

*2019ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ ಗ್ಲೋಬಲ್ ಬ್ಯುಸಿನೆಸ್ ಮೀಟ್‌ನಲ್ಲಿ `ಉತ್ಪಾದನೆಯಲ್ಲಿ ಮತ್ತು ಗ್ರಾಹಕರ ತೃಪ್ತಿಯಲ್ಲಿ ಶ್ರೇಷ್ಠತೆ' ಪಡೆದ ಕಂಪೆನಿ ಎಂಬ ಗೌರವಕ್ಕೆ ಪಾತ್ರವಾಗಿದೆ. 

*2019ರಲ್ಲಿ `ಅತ್ಯುತ್ತಮ 5000 ಒSಒಇಗಳ ಲಿಸ್ಟ್ನಲ್ಲಿ ಐಇಏSಂ ಲೈಟಿಂಗ್ ಕೂಡಾ ನಾಮನಿರ್ದೇಶನಗೊಂಡಿತ್ತು.

`ವಿಶೇಷ ಬೆಳಕಿನ ಉತ್ಪನ್ನ ತಯಾರಿಕೆಯಲ್ಲಿ ವಿಶ್ವಾಸಾರ್ಹ ಬ್ರ‍್ಯಾಂಡ್" ಎಂದು ಕೇಂದ್ರ ಸರ್ಕಾರದಿಂದ ಆತ್ಮ ನಿರ್ಭರ್ ಭಾರತ್ ಅಡಿಯಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದೆ. 

*ಎಲ್ಲಕ್ಕಿಂತ ಹೆಚ್ಚಾಗಿ ರೊನಾಲ್ಡ್ ಅವರಿಗೆ ಮುಂಬೈನಲ್ಲಿ ಅತ್ಯುತ್ತಮ ಸಾಧನೆ ಹಾಗೂ ಅವರ ಯಶೋಗಾಥೆಗಾಗಿ `ಹೈ ಫ್ಲೈಯರ್ಸ್ 50-ಗ್ಲೋಬಲ್ ಇಂಡಿಯನ್ಸ್' ಎಂದು ಆಯ್ಕೆ ಮಾಡಿ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಗಿದೆ. 

ಎಮರ್ಜಿಂಗ್ ಬ್ರಾಂಡ್ ಇನ್ ಲೈಟಿಂಗ್‌ನಲ್ಲಿ ಎಕನಾಮಿಕ್ ಟೈಮ್ಸ್ ಎಚೀವರ್ಸ್ ಆಫ್ ಕರ್ನಾಟಕ ಅವಾರ್ಡ್ 2023 ಪ್ರಶಸ್ತಿ ಪಡೆದಿದ್ದಾರೆ.

ಉದ್ಯಮ ಕ್ಷೇತ್ರದ ಸಾಧನೆಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಪ್ರಸ್ತುತ ಇವರ ಸಾಧನೆಗೆ ಪಲ್ಮಾ ಎಕ್ಸ್ ಪೋ-2024 ಪಲ್ಮಾ ಸೌಂಡ್ ಏಂಡ್ ಲೈಟ್ ಅವಾಡ್೯- 2024 ಪ್ರಶಸ್ತಿ ನೀಡಿ ಗೌರವಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article