
Ujire: ಮ್ಯಾಗ್ನಮ್-2024 ದಿ ಮಂಥನ ಸ್ಪರ್ಧೆ: ಎಸ್‌ಡಿಎಂ ರನ್ನರ್ ಅಪ್
Wednesday, June 12, 2024
ಉಜಿರೆ: ಜೂನ್ 6 ಮತ್ತು 7ರಂದು ಮಂಗಳೂರು ವಿಶ್ವವಿದ್ಯಾಲಯ ಆಯೋಜಿಸಿದ್ದ `ಮ್ಯಾಗ್ನಮ್-2024 ದಿ ಮಂಥನ' ರಾಷ್ಟ್ರಮಟ್ಟದ ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ಫೆಸ್ಟ್ನಲ್ಲಿ ಉಜಿರೆಯ ಎಸ್‌ಡಿಎಮ್ ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟಾರೆಯಾಗಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಬಿಜಿನೆಸ್ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶ್ರೇಯಸ್ ಮತ್ತು ಶ್ರಾವ್ಯ ಎಸ್ ಅವರು ಮೊದಲ ಸ್ಥಾನ ಗಳಿಸಿದ್ದಾರೆ. ಮಾರ್ಕೆಟಿಂಗ್ ಸ್ಪರ್ಧೆಯಲ್ಲಿ ಮನೋಜ್ ಎಸ್ ಮತ್ತು ಸಂಪ್ರೀತಾ ಅವರು ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಫೇಸ್ ಪೇಂಟಿAಗ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಿಶ್ಮಿತಾ ಮತ್ತು ಪದ್ಮಿನಿ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ.