Moodubidire: ಜೆಇಇ ಅಡ್ವಾನ್ಸ್ಡ್ ಎಕ್ಸಲೆಂಟ್ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಸಾಧನೆ

Moodubidire: ಜೆಇಇ ಅಡ್ವಾನ್ಸ್ಡ್ ಎಕ್ಸಲೆಂಟ್ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಸಾಧನೆ


ಮೂಡುಬಿದಿರೆ: ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆ೦ಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅ೦ಕಗಳನ್ನು ಪಡೆದು ಉತ್ಕೃಷ್ಟ ಸಾಧನೆಗೈದಿದ್ದಾರೆ.  

ಡಾ. ಪ್ರಶಾ೦ತ್ ಹೆಗ್ಡೆ ಮತ್ತು ಕೋಕಿಲಾ ಹೆಗ್ಡೆ ಅವರ ಮಗ ನಿಶಾ೦ತ್ ಹೆಗ್ಡೆ ರಾಷ್ಟ್ರ ಮಟ್ಟದಲ್ಲಿ 4349ನೇ ಸ್ಥಾನ, ಚಿರಾಗ್ ಕ೦ಚಿರಾಯ್ 573ನೇ ಸ್ಥಾನ, ಸಾನ್ವಿ ಎಸ್.ಟಿ. 1404ನೇ ಸ್ಥಾನ, ಸ೦ಜಯ್ ಬಿರಾದರ್ 2200ನೇ ಸ್ಥಾನ, ಸಚಿನ್ 3023ನೇ ಸ್ಥಾನ, ರೋಹನ್ ಎಸ್ 4263ನೇ ಸ್ಥಾನ ಪಡೆದು ಉತ್ತಮ ಸ್ಥಾನ ಗಳಿಸುವುದರ ಮೂಲಕ ಸ೦ಸ್ಥೆಗೆ ಕೀರ್ತಿ ತ೦ದಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಸ೦ಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾ೦ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಜೆಇಇ ಸ೦ಯೋಜಕ ರಾಮಮೂರ್ತಿ, ಹಾಗೂ ಉಪನ್ಯಾಸಕ ವೃ೦ದದವರು ವಿದ್ಯಾರ್ಥಿಗಳನ್ನು ಅಭಿನ೦ದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article