Moodubidire: ರಾ.ಗಾ. ವಿವಿಯಿಂದ ಪುರುಷರ ಮತ್ತು ಮಹಿಳೆಯರ ವಿಭಾಗದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ

Moodubidire: ರಾ.ಗಾ. ವಿವಿಯಿಂದ ಪುರುಷರ ಮತ್ತು ಮಹಿಳೆಯರ ವಿಭಾಗದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ


ಮೂಡುಬಿದಿರೆ: ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಆತಿಥ್ಯದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ವತಿಯಿಂದ ಮೂರು ದಿನಗಳ ಕಾಲ ವಿದ್ಯಾಗಿರಿಯ ಕೃಷಿಸಿರಿ ಸಭಾಂಗಣದಲ್ಲಿ ನಡೆಯುವ ಪುರುಷರ ಮತ್ತು ಮಹಿಳೆಯರ ವಿಭಾಗದ  ರಾಜ್ಯಮಟ್ಟದ ಕಬಡ್ಡಿ ಚಾಂಪಿಯನ್ ಶಿಫ್ ಮಂಗಳವಾರ ಆರಂಭಗೊಂಡಿತು.

ರಾಜ್ಯ ಕಬಡ್ಡಿ ಅಮೆಚೂರ್ ಅಸೋಸಿಯೇಷನ್ ನ ಅಧ್ಯಕ್ಷ ರಾಕೇಶ್ ಮಲ್ಲಿ ದೀಪ ಬೆಳಗಿಸಿ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿ ಇಡೀ ದೇಶದಲ್ಲೇ  ಕ್ರೀಡೆಗೆ  ಸಹಕಾರ ನೀಡುವ ಸಂಸ್ಥೆ ಇದ್ದರೆ ಅದು ಆಳ್ವಾಸ್ ಮಾತ್ರ. ಮುಂದೆ ಇಲ್ಲಿಯೇ ಫೆಡರೇಷನ್ ಕಫ್ ಆಯೋಜಿಸುವ ಬಗ್ಗೆ ಯೋಜನೆಯಿದ್ದು ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದರು.

 ಯಾವುದೇ ಕ್ರೀಡೆ ಮತ್ತು ಕ್ರೀಡಾಪಟುವಿಗೆ ಸಹಕಾರ ಅಗತ್ಯ.  ಕ್ರೀಡೆಗೆ ಸಹಕಾರ ಸಿಕ್ಕಿದರೆ ರಾಷ್ಟ್ರ ಅಂತರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ತಿಳಿಸಿದರು.

 ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಳ್ವಾಸ್ ಪ್ರವರ್ಥಕ ಡಾ. ಮೋಹನ ಅಳ್ವರು ಸ್ವತ: ಓರ್ವ ಕ್ರೀಡಾಪಟುವಾಗಿ, ತಮ್ಮ ಓದು, ವೃತ್ತಿಯೊಂದಿಗೆ ಕ್ರೀಡಾರಂಗದಲ್ಲೂ ಸಕ್ರಿಯರಾಗಿದ್ದವರು.1984 ರಲ್ಲೇ ತಮ್ಮ ವೈದ್ಯಕೀಯ ವೃತ್ತಿಯ ಆರಂಭದ ದಿನಗಳಲ್ಲೇ ಏಕಲವ್ಯ ಕ್ರೀಡಾ ಸಂಸ್ಥೆ ಕಟ್ಟಿ ಬೆಳೆಸಿದವರು. ಶಿಕ್ಷಣ ಸಂಸ್ಥೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೊದಲೇ ಅವರು ಕ್ರೀಡೆಗೆ ಆದ್ಯತೆ ನೀಡಿದವರು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಳುಗಳನ್ನು ರೂಪಿಸಿ, ಪ್ತೋತ್ಸಾಹಿಸಿದವರು. ಆಳ್ವಾಸ್ ಕ್ರೀಡೆಗೆ ಸದಾ ಪ್ತೋತ್ಸಾಹ ನೀಡುತ್ತಿದ್ದು ಮೆಡಿಕಲ್, ಪಾರಾಮೆಡಿಕಲ್ ಕೋರ್ಸ್ ಗಳಲ್ಲಿರುವ ವಿದ್ಯಾರ್ಥಿಗಳ ಕ್ರೀಡಾಸಕ್ತಿಯನ್ನು ಗುರುತಿಸಲು, ಕ್ರೀಡಾಸ್ಪೂರ್ತಿಯನ್ನು ಅವರಲ್ಲಿ ತುಂಬಲು ಬದ್ಧವಾಗಿದೆ ಎಂದರು.

ಸನ್ಮಾನ: 

ಅಖಿಲ ಭಾರತ ಅಂತರ ವಿವಿ  ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ  ವಿಜೇತ್ ಜಿತಿನ್ ನಾಯ್ಕ್, ಪ್ರೊ ಕಬಡಿ ಪಾಟ್ನ ಪೈರೆಟ್ಸ್ ನ ರಂಜಿತ್ ನಾಯ್ಕ್,  ಪ್ರೊ‌.ಕಬಡ್ಡಿ ಜೈಪುರ್ ಪಿಂಕ್ ಪ್ಯಾಂಥರ್ಸ್ ನ ಶಶಾಂಕ್ ಬಿ ಅವರನ್ನು ಸನ್ಮಾನಿಸಲಾಯಿತು. 


ಪ್ರಮುಖರಾದ ಪುರುಷೋತ್ತಮ್ ಪೂಜಾರಿ ಹಾಗೂ ರೋಹಿತ್ ತೊಕ್ಕೊಟ್ಟು, ರಾ.ಗಾ.ವಿವಿಯ  ದೈಹಿಕ ಶಿಕ್ಷಣ ನಿರ್ದೇಶಕ ಅವಿನಾಶ್ ಮತ್ತು ಕಾಲೇಜಿನ ವಿವಿಧ ವಿಭಾಗಗಳ ಪ್ರಾಂಶುಪಾಲರುಗಳು ಉಪಸ್ಥಿತರಿದ್ದರು.

ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿ ಅನಂತಕೃಷ್ಣ ನಿರೂಪಿಸಿದರು.ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಯತಿ ಕುಮಾ‌ರ್ ಸ್ವಾಮಿ ಗೌಡ ವಂದಿಸಿದರು. 

ಈ ಟೂರ್ನಿಯಲ್ಲಿ ಒಟ್ಟು 64 ಪುರುಷರ ಹಾಗೂ 19 ಮಹಿಳಾ ತಂಡಗಳು ಪಾಲ್ಗೊಂಡಿದ್ದು, ಮೂರು ದಿನಗಳ ಕಾಲ ಟೂರ್ನಿ ನಡೆಯಲಿದೆ. ಜೂನ್ 20ರಂದು ಅಂತಿಮ ಹಣಾಹಣಿ ಪಂದ್ಯಗಳು ಹಾಗೂ ಸಮಾರೋಪ ನಡೆಯಲಿದೆ.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article