Moodubidire: ವಿಶ್ವ ಪರಿಸರ ದಿನ-ಮೂಡುಬಿದಿರೆ ತಾಲೂಕಿನ ಗ್ರಾ.ಪಂ.ಗಳಲ್ಲಿ ಗಿಡನೆಟ್ಟು ಆಚರಣೆ
Wednesday, June 5, 2024
ಮೂಡುಬಿದಿರೆ: ವಿಶ್ವ ಪರಿಸರ ದಿನದ ಅಂಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್ ಮಂಗಳೂರು ಮತ್ತು ತಾಲೂಕು ಪಂಚಾಯತ್ ಮೂಡುಬಿದಿರೆ ಇವುಗಳ ಸಹಯೋಗದಲ್ಲಿ ತಾಲೂಕಿನ 12 ಪಂಚಾಯತ್ ಗಳ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನದ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು.
ಪುತ್ತಿಗೆ ಗ್ರಾ.ಪಂನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮ ನಾಯಕ ಬಿ. ಅವರು, ತೆಂಕಮಿಜಾರು ಗ್ರಾ.ಪಂ. ಆವರಣದಲ್ಲಿ ಪಿಡಿಒ ರೋಹಿಣಿ, ಪಾಲಡ್ಕದಲ್ಲಿ ಪಿಡಿಒ ರಕ್ಷಿತಾ, ಪಡುಮಾರ್ನಾಡು ಗ್ರಾ.ಪಂನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ ಗಿಡಗಳನ್ನು ನೆಟ್ಟರು.
ವಾಲ್ಪಾಡಿ ಗ್ರಾಮ ಪಂಚಾಯತ್ ನ ಎಂದ್ರಟ್ಟ ಅಮೃತ ಸರೋವರ ಹಾಗೂ ದರೆಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಂಪುಲು ಅಮೃತ ಸರೋವರದ ಆವರಣದಲ್ಲಿ ವಿವಿಧ ಪ್ರಭೇಧದ ಗಿಡಗಳನ್ನು ನೆಡಲಾಯಿತು.
ಶಿರ್ತಾಡಿ, ನೆಲ್ಲಿಕಾರು, ಹೊಸಬೆಟ್ಟು, ಇರುವೈಲು, ಬೆಳುವಾಯಿ, ಕಲ್ಲಮುಂಡ್ಕೂರು ಪಂಚಾಯತ್ ಆವರಣದಲ್ಲೂ ಗಿಡಗಳನ್ನು ನೆಡಲಾಯಿತು. ಪಂಚಾಯತ್ ಸಿಬಂದಿಗಳು ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.
