
Moodubidire: ಜೈನ ಪ್ರೌಢ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
Friday, June 21, 2024
ಮೂಡುಬಿದಿರೆ: ಜೈನ್ ಪ್ರೌಢ ಶಾಲೆಯ ಎನ್‌ಸಿಸಿ ವಾಯುದಳ, ನೌಕಾ ದಳ ಹಾಗೂ ಭೂ ದಳಗಳ ವತಿಯಿಂದ ಯೋಗ ದಿನಾಚರಣೆ ನಡೆಸಲಾಯಿತು.
ಡಿಜೆವಿ ಸಂಘದ ಸದಸ್ಯ ಪೃಥ್ವಿರಾಜ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶಾಮಪ್ರಸಾದ್ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಅಧಿಕಾರಿ ನಿತೇಶ್ ಕುಮಾರ್, ಅಧ್ಯಾಪಕ ನವೀನ್ ಬಂಗೇರ ಹಾಗೂ ಶಾರೀರಿಕ ಶಿಕ್ಷಕ ವಿಕಾಸ್ ಜೈನ್ ಉಪಸ್ಥಿತರಿದ್ದರು.
ವಾಯು ದಳದ 45, ಭೂ ದಳದ 50 ಹಾಗೂ ನೌಕಾ ದಳದ 25 ಕೆಡೆಟ್‌ಗಳು ಭಾಗವಹಿಸಿದ್ದರು. ನೌಕಾದಳದ ಅಧಿಕಾರಿ ವಿನಯಚಂದ್ರ ಯೋಗ ಕಾರ್ಯಕ್ರಮ ನಡೆಸಿಕೊಟ್ಟರು.