
Punjalakatte: ಹಳೇ ತಕರಾರು: ಹಲ್ಲೆ
Saturday, June 22, 2024
ಪುಂಜಾಲಕಟ್ಟೆ: ಹಳೆ ತಕಾರಿಗೆ ಸಂಬಂಧಿಸಿ ದಂಪತಿ ಹಾಗೂ ಮಗನಿಗೆ ನೆರೆಮನೆ ನಿವಾಸಿ ಹಲ್ಲೆಗೈದ ಘಟನೆ ಉಳಿ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ಸ್ಥಳೀಯ ನಿವಾಸಿ ಸೇಸಮ್ಮ, ಅವರ ಪತಿ ಚಂದ್ರಶೇಖರ ಹಾಗೂ ಮಗ ದೀಪಕ್ ಎಂದು ಹೆಸರಿಸಲಾಗಿದೆ. ಸ್ಥಳೀಯರಾದ ಸದಾಶಿವ ಹಾಗೂ ಪವನ್ ಎಂಬವರು ಹಲ್ಲೆಗೈದ ಆರೋಪಿಗಳಾಗಿದ್ದಾರೆ.
ನೆರೆಮನೆ ನಿವಾಸಿಗಳಾದ ಇವರ ಮಧ್ಯೆ ಕಳೆದ ಹಲವು ವರ್ಷಗಳಿಂದ ತಕರಾರಿದ್ದು, ಆರೋಪಿ ಸದಾಶಿವ ಅವರು ಚಂದ್ರಶೇಖರ ಅವರನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದಿದ್ದು, ಈ ಸಂದರ್ಭ ಸ್ಥಳಕ್ಕೆ ಬಂದ ಮಗ ದೀಪಕ್ ಗೆ ಮತ್ತೋರ್ವ ಆರೋಪಿ ಪವನ್ ಹಲ್ಲೆ ನಡೆಸಿದ್ದಲ್ಲದೆ ಜೀವಬೆದರಿಕೆ ಒಡ್ಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.