
Udupi: ಪೆಟ್ರೋಲ್ ಬೆಲೆ ಏರಿಕೆ-ಬಿಜೆಪಿ ದ್ವಂದ್ವ ನಿಲುವು
Tuesday, June 18, 2024
ಉಡುಪಿ: ಪೆಟ್ರೋಲ್ ಬೆಲೆ ಏರಿಕೆ ವಿಚಾರದಲ್ಲಿ ಬಿಜೆಪಿ ದ್ವಂದ್ವ ನಿಲುವು ತಳೆಯುತ್ತಿದೆ ಎಂದು ಜಿಲ್ಲಾ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಹೇಳಿದ್ದಾರೆ.
ಗ್ಯಾರೆಂಟಿ ಯೋಜನೆ ಉಳಿಸಿಕೊಳ್ಳಲು ರಾಜ್ಯ ಸರಕಾರ ಪೆಟ್ರೋಲ್ ಹಾಗೂ ಡಿಸೇಲ್ ದರ ಹೆಚ್ಚಳ ಮಾಡಿದೆ ಎಂದು ಆರೋಪಿಸುವ ಬಿಜೆಪಿಗೆ ತನ್ನ ಅಧಿಕಾರದ ಅವಧಿಯಲ್ಲಿ ಇದೇ ಪೆಟ್ರೋಲ್ ಬೆಲೆಯನ್ನು 75ರಿಂದ 110 ರೂ., ಗ್ಯಾಸ್ ಸಿಲಿಂಡರ್ ಬೆಲೆ 435 ರೂ.ನಿಂದ 1,150 ರೂ. ಹೆಚ್ಚಳ ಆದಾಗ ಬೆಲೆ ಏರಿಕೆ ಎಂದು ಯಾಕೆ ಕಂಡುಬಂದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮೋದಿಗಾಗಿ ಪೆಟ್ರೋಲ್ ಬೆಲೆ 1000 ರೂ. ಆದರೂ ಅಡ್ಡಿ ಇಲ್ಲ ಎಂದಿದ್ದವರು ಇದೀಗ ಪೆಟ್ರೋಲ್‌ಗೆ 3 ರೂ. ಹೆಚ್ಚಳವಾದಾಗ ಪ್ರತಿಭಟನೆ ಮಾಡುತ್ತಿರುವುದು ಅಸಹ್ಯಕರ ಎಂದು ಭಾಸ್ಕರ ರಾವ್ ತಿಳಿಸಿದ್ದಾರೆ.