Udupi: ತೆಂಕನಿಡಿಯೂರು ಕಾಲೇಜಿಗೆ ರ‍್ಯಾಂಕ್
Saturday, June 8, 2024
ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2023-24ನೇ ಸಾಲಿನ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ 2 ರ‍್ಯಾಂಕ್ ಗಳಿಸಿದೆ.
ಎಂ.ಎ. ಇತಿಹಾಸ ವಿಭಾಗದ ದಯೇಶ್ ಪ್ರಥಮ ರ‍್ಯಾಂಕ್ ಹಾಗೂ ಎಂ.ಎ. ಸಮಾಜಶಾಸ್ತ್ರ ವಿಭಾಗದ ನಾಗರತ್ನ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಇತಿಹಾಸ ಹಾಗೂ ಸಮಾಜಶಾಸ್ತ್ರ ವಿಭಾಗಗಳೆರಡೂ ಸತತವಾಗಿ ಕಳೆದ ಮೂರು ವರ್ಷದಿಂದ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳಲ್ಲಿ ಪ್ರಥಮ ರ‍್ಯಾಂಕನ್ನು ತಮ್ಮದಾಗಿಸಿಕೊಂಡಿದೆ.