Mangalore: ಜೂ.17 ರಂದು ಕರಾವಳಿಯಲ್ಲಿ ಬಕ್ರೀದ್
Saturday, June 8, 2024
ಮಂಗಳೂರು: ಶುಕ್ರವಾರ ಅಸ್ತಮಿಸಿದ ಚಂದ್ರ ಶನಿವಾರ ರಾತ್ರಿ ದುಲ್‌ಹಜ್ ತಿಂಗಳ ಪ್ರಥಮ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಜೂ.17 ರಂದು ಕರಾವಳಿಯಲ್ಲಿ ಬಕ್ರೀದ್ (ಈದುಲ್ ಅಝ್‌ಹಾ) ಆಚರಿಸಲು ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸೂಚಿಸಿದ್ದಾರೆ.
ಜೂ.8ರಂದು ದುಲ್ಹಜ್ಜ್ ಒಂದು ಆಗಿರುತ್ತದೆ. ಜೂ.16 ರಂದು ಅರಫಾ ದಿನವಾಗಿರುತ್ತದೆ ಎಂದು ಖಾಝಿ ತಿಳಿಸಿರುವುದಾಗಿ ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.