
Ullal: ಸಮಾಜದ ಅಭಿವೃದ್ಧಿ ಪರ ಕಾರ್ಯನಿರ್ವಹಿಸಬೇಕು: ಯು.ಟಿ. ಖಾದರ್
Sunday, June 23, 2024
ಉಳ್ಳಾಲ: ಸಮಾಜದ ಅಭಿವೃದ್ಧಿಗಾಗಿ ಸಂಘಟನಾತ್ಮಕವಾಗಿ ಕಾರ್ಯ ನಿರ್ವಹಿಸುವ ಮೂಲಕ ಸಂಘಟನೆಗಳು ಯಶಸ್ಸಿನ ಕಡೆ ಹೆಜ್ಜೆ ಇಡಬೇಕು ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ಅವರು ಜಿಲ್ಲಾ ಹ್ಯುಮಾನಿಟಿ ಫೌಂಡೇಶನ್ ಮಂಗಳೂರು ವತಿಯಿಂದ ತೊಕ್ಕೊಟ್ಟುವಿನಲ್ಲಿರುವ ಸಂಘಟನೆಯ ಕಚೇರಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ನಾಸೀರ್ ಅಹ್ಮದ್ ಸಾಮಣಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಕಲಂದರ್ ಪರ್ತಿಪ್ಪಾಡಿ, ಆಸಿಪ್ ತಾಜ್ ಹನೀಫ್ ಕುತ್ತಾರ್, ಪ್ರಧಾನ ಕಾರ್ಯದರ್ಶಿ ಹಮೀದ್ ಪಜೀರ್, ಕಾರ್ಯದರ್ಶಿ ಸೈಫುಲ್ಲಾ ಸೋಮೇಶ್ವರ, ಕೋಶಾಧಿಕಾರಿ ಇಲ್ಯಾಶ್ ಚಾರ್ಮಾಡಿ, ಸಂಘದ ಸಂಚಾಲಕರಾದ ಪತ್ರಕರ್ತ ಬಶೀರ್ ಕಲ್ಕಟ್ಟಾ, ಸದಸ್ಯ ರಾದ ಜಮೀರ್ ಉಳ್ಳಾಲ, ಸಾದಿಕ್ ಕಲ್ಲಾಪು, ಸರ್ಫರಾಜ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.