
Moodubidire: ಜವನೆರ್ ಬೆದ್ರ ಫೌಂಡೇಶನ್‌ನಿಂದ ವನಮಹೋತ್ಸವ
Sunday, June 23, 2024
ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್ ವತಿಯಿಂದ ಪ್ರಥಮ ವರ್ಷದ ವನ ಮಹೋತ್ಸವ ಕಾರ್ಯಕ್ರಮವು ಕಲ್ಲಬೆಟ್ಟು ಶ್ರೀ ಮಹಾಮಾಯಿ ದೇಗುಲದ ಸಮೀಪ ನಡೆಯಿತು.
ದೇಗುಲದ ಅರ್ಚಕ ಸೂರ್ಯ ಆರ್. ರಾವ್ ಗಿಡ ನೆಟ್ಟು ಚಾಲನೆ ನೀಡಿದರು. ಸಂಘಟನೆಯ ಪ್ರಾಜೆಕ್ಟ್ ಕದಂಬ ವನ ಪ್ರಯುಕ್ತ ದೇಗುಲದ ಸುತ್ತಲೂ 9 ಕದಂಬ ಗಿಡಗಳನ್ನು ನೆಡಲಾಯಿತು.
ಮಾವು, ಹಲಸು ಗಿಡಗಳು ಕೂಡ ನೆಡಲಾಯಿತು. ಜವನೆರ್ ಬೆದ್ರ ಫೌಂಡೇಶನ್ ಸ್ಥಾಪಕಾಧ್ಯಕ್ಷ ಅಮರ್ ಕೋಟೆ, ಸಂಚಾಲಕ ನಾರಾಯಣ ಪಡುಮಲೆ, ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್, ಪ್ರಮುಖರುಗಳಾದ ಸುರೇಶ್ ಕಾಯಾರಗುಂಡಿ, ಸಂಪತ್ ಪೂಜಾರಿ, ಗಣೇಶ್ ಪೈ, ಪ್ರತಿಷ್ ಸಮಗರ್ ಹಾಗೂ ಮಹಾಮ್ಮಾಯಿ ಸೇವ ಸಮಿತಿಯ ಸದಸ್ಯರಾದ ಸುಧೀರ್ ಪೈ, ರಾಜೇಶ್ ಬೈಲೂರು ಉಪಸ್ಥಿತರಿದ್ದರು.