.jpg)
Vitla: ಹದಗೆಟ್ಟಿರುವ ರಸ್ತೆ ಹಾಗೂ ಕಾಲೇಜಿನ ಸಭಾಂಗಣಕ್ಕೆ ಕಾಯಕಲ್ಪದ ಭರವಸೆ: ಅಶೋಕ್ ಕುಮಾರ್ ರೈ
ವಿಟ್ಲ: ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಂಪರ್ಕ ಕಲ್ಪಿಸುವ, ಪ್ರಸ್ತುತ ಸಂಪೂರ್ಣ ಹದಗೆಟ್ಟಿರುವ ರಸ್ತೆ ಹಾಗೂ ಕಾಲೇಜಿನ ಸಭಾಂಗಣದ ಕಾಯಕಲ್ಪ ಮಾಡುವ ಭರವಸೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಸಕ ಅಶೋಕ್ ಕುಮಾರ್ ರೈ ನೀಡಿದರು.
ಕಾಲೇಜಿನಲ್ಲಿ ಮಂಗಳವಾರ ನಡೆದ ವಾರ್ಷಿಕೋತ್ಸವ ಸಮಾರಂಭದ ವೇಳೆ ವಿದ್ಯಾರ್ಥಿಗಳ ಮನವಿಗೆ ಅವರು ಸ್ಪಂದಿಸಿದರು.
ಪದವಿ ಪೂರ್ಣಗೊಳಿಸಿದ ವಿಧ್ಯಾರ್ಥಿಗಳಿಗೆ ತಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉದ್ಯೋಗ ನೋಂದಣಿಯ ಸಲಹೆ ನೀಡಿದರು.
ಸ.ಪ್ರ.ದ.ಕಾಲೇಜು ಪೂಂಜಾಲಕಟ್ಟೆಯ ಪ್ರಾಚಾರ್ಯ ಪ್ರೊ.ಮಾಧವ, ಬಂಟ್ವಾಳ ಸ.ಪ್ರ.ದ. ಕಾಲೇಜಿನ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಡಾ. ಶ್ರೀಜಾ ಜೆ. ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಪದ್ಮನಾಭ ವಾರ್ಷಿಕ ವರದಿ ವಾಚಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಯಂ.ವಿ.ಕೆ. ಆಶ್ರಫ್ ಹಾಗೂ ಸದಸ್ಯರು, ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಪ್ರಾಧ್ಯಾಪಕ, ಪ್ರಾಧ್ಯಾಪಕೇತರ ವೃಂದದವರು ಉಪಸ್ಥಿತರಿದ್ದರು.
ಸಮಾಜಕಾರ್ಯ ವಿಭಾಗ ಸಹ ಪ್ರಾಧ್ಯಾಪಕಿ ಡಾ. ಸೌಮ್ಯ ಎಚ್. ಸ್ವಾಗತಿಸಿದರು. ಐಕ್ಯೂಎಸಿ ಸಂಚಾಲಕಿ ಪ್ರೊ. ಮಾಲವಿಕ ಕ್ಯಾಥರಿನ್ ವಂದಿಸಿದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ. ಪ್ರಸನ್ನ ಕುಮಾರ್ ಸಿ. ಕಾರ್ಯಕ್ರಮ ನಿರೂಪಿಸಿದರು. ಸ್ನಾತಕ - ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.