
Mangalore: ಗೋವಾದಲ್ಲಿ ವೃಶ್ಚಿಕ ಹಿಂದೂ ರಾಷ್ಟ್ರ ಮಹೋತ್ಸವ: ಚಂದ್ರ ಮೊಗವೀರ
Wednesday, June 19, 2024
ಮಂಗಳೂರು: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜೂ.24ರಿಂದ ಜೂ.30ರವರೆಗೆ ಗೋವಾದಲ್ಲಿ ‘ವೃಶ್ಚಿಕ ಹಿಂದೂ ರಾಷ್ಟ್ರ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿ ಸಮನ್ವಯಕರಾದ ಚಂದ್ರ ಮೊಗವೀರ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದು ಹನ್ನೆರಡನೆಯ ಅಖಿಲಭಾರತೀಯ ಹಿಂದೂ ರಾಷ್ಟ್ರ ಅಧಿವೇಶನವಾಗಿದೆ. ಇದರಲ್ಲಿ ಹಿಂದೂ ರಾಷ್ಟ್ರಕ್ಕೆ ಸಂಬಂಧಿತ ವಿವಿಧ ವಿಷಯಗಳ ಬಗ್ಗೆ ವಿಶೇಷ ಗಣ್ಯರ ಸಂವಾದ, ಗುಂಪು ಚರ್ಚೆ, ಸನಾತನ ಧರ್ಮದ ವೈಚಾರಿಕ ಸುರಕ್ಷೆ, ಧರ್ಮ ಮತ್ತು ರಾಷ್ಟ್ರವಿರೋಧಿ ನೆರೆಟಿವ್‌ಗಳಿಗೆ ಪ್ರತ್ಯುತ್ತರ, ಹಿಂದೂ ರಾಷ್ಟ್ರಕ್ಕಾಗಿ ಸಾಂವಿಧಾನಿಕ ಪ್ರಯತ್ನ, ಇತ್ಯಾದಿ ವಿಷಯಗಳ ಕುರಿತಂತೆ ಸಮಗ್ರ ಚರ್ಚೆಗಳು ನಡೆಯಲಿವೆ. ಅಮೆರಿಕಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಘಾನಾ, ನೇಪಾಳ ಮತ್ತು ಬಾಂಗ್ಲಾದೇಶಗಳ ಪ್ರತಿನಿಧಿಗಳು, ಭಾರತದ 26 ರಾಜ್ಯಗಳಿಂದ 2 ಸಾವಿರಕ್ಕಿಂತಲೂ ಅಧಿಕ ಪ್ರತಿನಿಧಿಗಳು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖರಾದ ಜರ್ನಾದನ, ಕೀರ್ತೇಶ್, ಪವಿತ್ರಾ ಉಪಸ್ಥಿತರಿದ್ದರು.