Bajpe: ಅಕ್ರಮ ಮರಳು ಸಹಿತ ಟಿಪ್ಪರ್ ವಶಕ್ಕೆ

Bajpe: ಅಕ್ರಮ ಮರಳು ಸಹಿತ ಟಿಪ್ಪರ್ ವಶಕ್ಕೆ

ಬಜಪೆ: ಬಜಪೆ ಅಡ್ಡೂರು ಗ್ರಾಮದ  ಕೋಡಿಬೆಟ್ಟು ಕಡೆಗೆ ಹೋಗುವ ರಸ್ತೆಯ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಹಾಗೂ ಅದರ ಸಾಗಾಟಕ್ಕೆ ಬಳಸಿದ್ದ ಟಿಪ್ಪರ್ ಲಾರಿಯನ್ನು ಬಜಪೆ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಲಾರಿಯ ಬೆಲೆ  3 ಲಕ್ಷ ವಾಹನದಲ್ಲಿ ಎರಡು ಯೂನಿಟ್ಗಳಷ್ಟು ಮರಳಿದ್ದು, ಅದರ ಮೌಲ್ಯ 5 ಸಾವಿರ ಎಂದು ಅಂದಾಜಿಸಲಾಗಿದೆ. 

‘ಬಜಪೆ ಠಾಣೆಯ ಪಿಎಸ್‌ಐ ಲತಾ ಅವರು ಗಸ್ತು ಕಾರ್ಯ ನಿರತರಾಗಿದ್ದಾಗ ಕೋಡಿಬೆಟ್ಟು ರಸ್ತೆ ಬಳಿ ಟಿಪ್ಪರ್ ಲಾರಿ ಎದುರಾಗಿತ್ತು. ಅದನ್ನು ನಿಲ್ಲಿಸುವಂತೆ ಸೂಚನೆ ನೀಡಿದರೂ, ಚಾಲಕ ಹಿಂದಕ್ಕೆ ಚಲಾಯಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಚಾಲಕನನ್ನು ಹಿಡಿದು ವಿಚಾರಿಸಿದಾಗ ಗುರುಪುರದಲ್ಲಿ ಫಲ್ಗುಣಿ ನದಿಯಿಂದ ರಾಜಧನ ಪಾವತಿಸದೇ ತೆಗೆದ ಮರಳನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಒಪ್ಪಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲಕನನ್ನು ತೋಕೂರು ಗ್ರಾಮದ ಹಳೆಯಂಗಡಿಯ ಆದಿತ್ಯ ಕೀರ್ತನ್ (40) ಎಂದು ಗುರುತಿಸಲಾಗಿದೆ. ಆತ ಲಾರಿಯ ಮಾಲೀಕರ ಜೊತೆ ಸೇರಿ ಮರಳು ಅಕ್ರಮ ಸಾಗಾಟ ದಂಧೆಯಲ್ಲಿ ತೊಡಗಿದ್ದ. ಪಿಎಸ್‌ಐ ಲತಾ ನೀಡಿದ ದೂರಿನ ಅನ್ವಯ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article