ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಗೂ ತಟ್ಟಿದ ಟ್ರಾಫಿಕ್ ಜಾಮ್ ಬಿಸಿ: ದ.ಕ. ಜಿಲ್ಲಾ ಪ್ರವಾಸ ರದ್ದು

ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಗೂ ತಟ್ಟಿದ ಟ್ರಾಫಿಕ್ ಜಾಮ್ ಬಿಸಿ: ದ.ಕ. ಜಿಲ್ಲಾ ಪ್ರವಾಸ ರದ್ದು


ಬೆಂಗಳೂರು: ಅತಿಯಾದ ಮಳೆಯಿಂದಾಗಿ ಸೃಷ್ಟಿಯಾಗಿರುವ ಟ್ರಾಫಿಕ್ ಜಾಮ್ ಬಿಸಿ ಆರೊಗ್ಯ ಸಚಿವ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೂ ತಟ್ಟಿದೆ. ಇದರಿಂದಾಗಿ ದ.ಕ. ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನೇ ರದ್ದು ಮಾಡಿರುವ ಘಟನೆ ನಡೆದಿದೆ.

ರಾಜಧಾನಿ ಬೆಂಗಳೂರಿನಲ್ಲಿ ಅಲ್ಲಲ್ಲಿ ಮಳೆ, ವಿಕೆಂಡ್ ಹಿನ್ನೆಲೆಯಲ್ಲಿ ಹಲವೆಡೆ ಟ್ರಾಫಿಕ್ ಜಾಮ್ ಸಂಭವಿಸಿದೆ. ಏರ್ ಪೋರ್ಟ್ ರಸ್ತೆಯಂತು ವಾಹನ ದಟ್ಟಣೆಯಿಂದಾಗಿ ಸಂಪೂರ್ಣ ಜಾಮ್ ಆಗಿದೆ. ಇದೇ ವೇಳೆ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಲೆಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಸಚಿವ ದಿನೇಶ್ ಗುಂಡೂರಾವ್ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಾರೆ.

ಬೆಂಗಳೂರು ಏರ್ ಪೋರ್ಟ್‌ನಿಂದ ಮಂಗಳೂರಿಗೆ ತೆರಳಲು ಸಚಿವರು ತೆರಳುತ್ತಿದ್ದರು. ಈ ವೇಳೆ ಏರ್‌ಪೋರ್ಟ್ ರಸ್ತೆ ಬ್ಲಾಕ್ ಆದ ಕಾರಣ ಟ್ರಾಫಿಕ್ ಮಧ್ಯೆ ಸಿಲುಕಿ ಒದ್ದಾಡಿದ್ದಾರೆ. ಈ ವೇಳೆ ಮಂಗಳೂರಿನತ್ತ ತೆರಳುವ ವಿಮಾನ ಟೇಕ್ ಆಫ್ ಆಗಿದ್ದು, ವಿಮಾನ ಮಿಸ್ ಆಗಿದೆ. ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸವನ್ನೇ ಸಚಿವರು ರದ್ದು ಮಾಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್, ಅದ್ಯಪಾಡಿ, ಪಾಣೆಮಂಗಳೂರು, ಕೆತ್ತಿಕಲ್ ಪ್ರದೇಶಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲನೆ ನಡೆಸಬೇಕಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article