
Kasaragod: ಮಹಿಳೆಗೆ ಹಾವು ಕಡಿದು ಸಾವು
Thursday, July 4, 2024
ಕಾಸರಗೋಡು: ಹಾವು ಕಡಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಪೈವಳಿಕೆ ಸಮೀಪದ ಕುರುಡಪದವು ಎಂಬಲ್ಲಿ ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ ನಡೆದಿದೆ.
ಪೈವಳಿಕೆ ಕುರುಡಪದವಿನ ಚೋಮು (64) ಮೃತಪಟ್ಟ ಮಹಿಳೆ.
ಮಲಗಿದ್ದ ಚೋಮುರವರ ಕೈಗೆ ಯಾವುದೋ ಜೀವಿ ಕಡಿದ ಬಗ್ಗೆ ಅನುಭವವಾಗಿದ್ದು, ಎಚ್ಚರಗೊಂಡು ಸಹೋದರನಿಗೆ ತಿಳಿಸಿದ್ದಾರೆ. ಮನೆಯೊಳಗೆ ಶೋಧ ನಡೆಸಿದಾಗ ನಾಗರ ಹಾವು ಪತ್ತೆಯಾಗಿದೆ. ಕೂಡಲೇ ನೆರೆಮನೆಯರ ಸಹಾಯದಿಂದ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ.