
Kateel: ಮದುವೆ ಇಷ್ಟವಿಲ್ಲದೆ ನದಿಗೆ ಹಾರಿ ಯುವತಿ ಆತ್ಮಹತ್ಯೆ
Thursday, July 11, 2024
ಕಟೀಲು: ಮದುವೆ ನಿಶ್ಚಯವಾಗಿದ್ದ ಯುವತಿಯೋರ್ವಳು ಕಟೀಲು ಮಚ್ಚಾರು ಸಮೀಪದಲ್ಲಿ ನಂದಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಮೂಲ್ಕಿ ಸಮೀಪದ ಮೊಯಿಲೊಟ್ಟು ದಿ.ಪದ್ಮನಾಭ ಪೂಜಾರಿ ಎಂಬವರ ಮಗಳು ಸುಜಾತಾ (30) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಈ ಮಧ್ಯೆ ಸುಜಾತಾ ಮೊಯಿಲೊಟ್ಟುವಿನ ತಮ್ಮ ಮನೆಯಿಂದ ಬಡಗ ಎಕ್ಕಾರು ಗ್ರಾಮದ ಮಚ್ಚಾರು ಎಂಬಲ್ಲಿ ಇರುವ ತಮ್ಮ ದೊಡ್ಡಮ್ಮನ ಮನೆಗೆ ಬಂದ್ದಿದ್ದವಳು ಬುಧವಾರ ಬೆಳಿಗ್ಗೆ ಮನೆಯ ಸಮೀಪದಲ್ಲಿಯೇ ನಂದಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.