Madikeri: ಮಂಗಳೂರು-ಮಡಿಕೇರಿ ಸಂಚಾರ ಬಂದ್

Madikeri: ಮಂಗಳೂರು-ಮಡಿಕೇರಿ ಸಂಚಾರ ಬಂದ್

ಮಡಿಕೇರಿ: ಮಂಗಳೂರು ಮಡಿಕೇರಿಯ ಕರ್ತೋಜಿ ಗ್ರಾಮದ ಬಳಿ ಹೆದ್ದಾರಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಇದರೊಂದಿಗೆ ಗುಡ್ಡ ಕುಸಿಯುವ ಭೀತಿಯ ಹಿನ್ನೆಲೆಯಲ್ಲಿ ಜು.18 ರ ರಾತ್ರಿ 8 ಗಂಟೆಯಿಂದ ಜು.22 ರ ಬೆಳಿಗ್ಗೆ 6 ಗಂಟೆಯವರೆಗೆ ಮಂಗಳೂರು-ಮಡಿಕೇರಿ ಹೆದ್ದಾರಿ ಬಂದ್ ಮಾಡಲಾಗಿದೆ.

ಹೆದ್ದಾರಿಯಲ್ಲಿ ಮಡಿಕೇರಿಯಿಂದ ಸಂಪಾಜೆವರೆಗೆ ರಾತ್ರಿ ವೇಳೆಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರ ನಿಷೇಧ ಹೇರಿ ಕೊಡಗು ಜಿಲ್ಲಾಧಿಕಾರಿ ವೆಂಕಟ ರಾಜಾ ಆದೇಶ ಹೊರಡಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article