ತುರ್ತು ಸಂದರ್ಭಗಳಿಗಾಗಿ ಮೆಸ್ಕಾಂನಿಂದ 2 ಹೊಸ ದೂರವಾಣಿ ಸಂಪರ್ಕ
Monday, July 22, 2024
ಮಂಗಳೂರು: ಗಂಭೀರ ಸಮಸ್ಯೆ ಹಾಗೂ ತುರ್ತು ಸಂದರ್ಭಗಳಲ್ಲಿ ಇಲಾಖೆಗೆ ತ್ವರಿತ ಮಾಹಿತಿ ಹಾಗೂ ದೂರು ನೀಡಲು 2 ಹೊಸ ತುರ್ತು ದೂರವಾಣಿ ಸಂಖ್ಯೆಗಳನ್ನು ವ್ಯವಸ್ಥೆಗೊಳಿಸಲಾಗಿದ್ದು, ತಕ್ಷಣದಿಂದಲೇ ಕಾರ್ಯಾಚರಣೆಗೊಂಡಿವೆ. ಸಾರ್ವಜನಿಕರು ಈ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೂ.ಸಂ.: 8277883388, 0824-2950953 ಆಗಿದ್ದು, ಸಾರ್ವಜನಿಕರು ಈ ದೂರವಾಣಿಗಳನ್ನು ಗಂಭೀರ ಮತ್ತು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕೆಂದು ವಿನಂತಿಸಲಾಗಿದೆ.
ಇನ್ನಿತರ ಮೆಸ್ಕಾಂ ಸೇವೆಗಳಿಗಾಗಿ ಇಲಾಖೆಯ ಉಚಿತ ಸಹಾಯವಾಣಿ 1912 ಹಾಗೂ ಇಲಾಖೆ ಈಗಾಗಲೇ ವ್ಯವಸ್ಥೆಗೊಳಿಸಿರುವ ಸ್ಥಳಿಯ ಕಚೇರಿಯ ದೂರವಾಣಿಗಳನ್ನು ಬಳಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.