Mangalore: ಜು.20ರಂದು ಕಾರ್ಯಕರ್ತರ ಸಮ್ಮಿಲನ
ಮಂಗಳೂರು: ರಾಜ್ಯ ವಿಧಾನ ಪರಿಷತ್ಗೆ ದ್ವಿತೀಯ ಬಾರಿಗೆ ಶಾಸಕರಾಗಿ ಚುನಾಯಿತರಾದ ಐವನ್ ಡಿಸೋಜ ಅವರಿಗೆ ಹಾಗೂ ರಾಜ್ಯ ಸರಕಾರದಿಂದ ವಿವಿಧ ನಿಗಮಗಳಿಗೆ ನಾಮ ನಿರ್ದೇಶನಗೊಂಡ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರಿಗೆ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಅಭಿನಂದನಾ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಮ್ಮಿಲನ ಜು.20ರಂದು ಸಂಜೆ 4ಕ್ಕೆ ನಗರದ ಉರ್ವಸ್ಟೋರ್ನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸುವರು ಎಂದು ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಕಾಶ್ ಬಿ. ಸಾಲ್ಯಾನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಐವನ್ ಡಿಸೋಜ, ವಿವಿಧ ಸಂಸ್ಥೆಗಳಿಗೆ ನೇಮಕಾತಿಗೊಂಡ ರಘುರಾಜ್ ಕದ್ರಿ, ಸಮರ್ಥ್ ಭಟ್, ಮೋಹನ್ ಕೊಪ್ಪಲ, ಕೆ. ಚೇತನ್ಕುಮಾರ್, ತನ್ವೀರ್ ಶ್ಹಾ, ಸತೀಶ್ ಪೆಂಗಲ್, ನೆಲ್ಸನ್ ಮೊಂತೆರೊ, ಗಿರೀಶ್ ಶೆಟ್ಟಿ, ಶಾಂತಲಾ ಗಟ್ಟಿ, ಅಲಿಸ್ಟನ್ ಡಿಕುನ್ಹ, ಚಂದ್ರಕಲಾ ಡಿ. ರಾವ್, ಪದ್ಮನಾಭ ಅಮೀನ್ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಬಲೆ ತೆಲಿಪಾಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಅಭಿನಂದನಾ ಸಮಿತಿ ಸಂಚಾಲಕ ಸಂತೋಷ್ ಕುಮಾರ್ ಶೆಟ್ಟಿ, ಪ್ರಮುಖರಾದ ಸಂಶುದ್ದೀನ್, ರೂಪಾ ಚೇತನ್, ರಾಕೇಶ್ ದೇವಾಡಿಗ, ಹ್ಯಾರಿ ಡಿಸೋಜ, ಲಿಯಾಖತ್ ಶಾ ಉಪಸ್ಥಿತರಿದ್ದರು.