Mangalore: ಕ್ಲೋರೋಫಾರ್ಮ್ ಬಳಸಿ ದರೋಡೆಗೆ ಯತ್ನ: ಪ್ರಕರಣ ದಾಖಲು

Mangalore: ಕ್ಲೋರೋಫಾರ್ಮ್ ಬಳಸಿ ದರೋಡೆಗೆ ಯತ್ನ: ಪ್ರಕರಣ ದಾಖಲು

ಮಂಗಳೂರು: ಬಜಪೆಯ ಮಾರುಕಟ್ಟೆ ಸಮೀಪದ ಖಾಸಗಿ ಫೈನಾನ್ಸ್ ಒಂದಕ್ಕೆ ಮೂವರು ಅಪರಿಚಿತವ್ಯಕ್ತಿಗಳು ಗುರುವಾರ ದಿಢೀರ್ ನುಗ್ಗಿ ಕ್ಲೋರೋಫಾರ್ಮ್ ಬಳಸಿ ದರೋಡೆಗೆ ಯತ್ನಿಸಿ ಪರಾರಿಯಾಗಿರುವ ಕುರಿತು ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಬುಧವಾರ ಆಕ್ಟಿವಾದಲ್ಲಿ ಆಗಮಿಸಿದ ಆರೋಪಿಗಳು ಬಜಪೆಯ ಮಸೀದಿ ಕಡೆಯಿಂದ ಆಗಮಿಸಿ ಹೂವಿನ ಮಾರುಕಟ್ಟೆ ಬಳಿಗೆ ಹೋಗಿ ವಾಪಾಸ್ಸು ಬಂದು ಮಾರುಕಟ್ಟೆ ಸಮೀಪದ ಖಾಸಗಿ ಫೈನಾನ್ಸ್ ಗೆ ನುಗ್ಗಿದ್ದಾರೆ. ಆರೋಪಿಗಳು ಚಿಕ್ಕ ಆಸಿಡ್ ತುಂಬಿದ ಡಬ್ಬವೊಂದರ ಮುಚ್ಚಳ ತೆಗೆದು ಟೇಬಲ್ ಮೇಲಿಟ್ಟು ಕ್ಯಾಶ್‌ಗೆ ಬಲಾತ್ಕಾರವಾಗಿ ಕೈ ಹಾಕಲು ಪ್ರಯತ್ನಿಸಿದ್ದಾರೆ. ಈ ವೇಳೆ ತಡೆಯಲು ಯತ್ನಿಸಿದ ಫೈನಾನ್ಸ್ ನ ಇಬ್ಬರು ಮಹಿಳಾ ಸಿಬ್ಬಂದಿಗಳನ್ನು ದೂಡಿ ಹಾಕಿದ್ದು, ಈ ವೇಳೆ ಮಹಿಳಾ ಸಿಬ್ಬಂದಿಗಳು ಜೋರಾಗಿ ಕಿರುಚಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೂವರು ಆರೋಪಿಗಳ ಪೈಕಿ ಒಬ್ಬ ಹೆಲೈಟ್ ಧಾರಿ ಸ್ಕೂಟರನ್ನು ಸ್ಟಾರ್ಟಿಂಗ್‌ನಲ್ಲಿಯೇ ನಿಲ್ಲಿಸಿ ಕಾಯುತ್ತಿದ್ದು ಇನ್ನಿಬ್ಬರ ಪೈಕಿ ಒಬ್ಬ  ಬುರ್ಖಾಧಾರಿಯಾಗಿದ್ದು ಸವಾರನ ಹಿಂಬದಿಯಲ್ಲಿ ಕುಳಿತಿದ್ದ ಚಲನವಲನಗಳನ್ನು ಪ್ರತ್ಯಕ್ಷದರ್ಶಿಗಳು ಗಮನಿಸಿರುತ್ತಾರೆ.

ಈತ ಬುರ್ಖಾ ಧರಿಸಿದ್ದರೂ ಗಂಡಸ್ಸೆಂದುಹಲವರ ಗಮನಕ್ಕೆ ಬಂದಿದೆ. ಫೈನಾನ್ಸ್ ಗೆ ನುಗ್ಗಿದ ಇಬ್ಬರಲ್ಲಿ ಒಬ್ಬ ಹೆಲೈಟ್ ಹಾಗೂ ರೈನ್ ಕೋಟ್ ಧರಿಸಿಯೇ ಇದ್ದ.

ದರೋಡೆಗೆ ಯತ್ನಿಸಿದ ಮೂವರು ಅಪರಿಚಿತರ ತಂಡ ಒಂದೇ ಸ್ಕೂಟರ್‌ನಲ್ಲಿ ಅತಿವೇಗದಿಂದ ಮಸೀದಿ ಪಕ್ಕದ ರಸ್ತೆಯ ಮುರಾ ಜಂಕ್ಷನ್ ಮೂಲಕ ಕೊಳಂಬೆ ಮಾರ್ಗವಾಗಿ ಗುರುಪುರ ಕೈಕಂಬ ಕಡೆಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಆರೋಪಿಗಳು ತಂದ ಆಸಿಡ್ ಕ್ಲೋರೋಫಾರ್ಮ್ ಎನ್ನಲಾಗಿದ್ದು ಹೆಚ್ಚುವರಿ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ವ್ಯವಸ್ಥಿತ ಸಂಚು ನಡೆಸಿ ದರೋಡೆಯ ಪ್ರಯತ್ನ ನಡೆಸಿರುವುದರ ಹಿಂದೆ ಜಾಲವೊಂದರ ಕೈವಾಡ ಇರಬಹುದೆಂದು ಸಂಶಯಿಸಲಾಗಿದೆ. ಈ ಬಗ್ಗೆ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article