Talapadi: ತಲಪಾಡಿ ಗಡಿಯಲ್ಲಿ ಕೇರಳ ಲಾಟರಿ ಮಾರಟಗಾರರಿಗೆ ಸರ್ವ ಪಕ್ಷ ನೈತಿಕ‌ ಬೆಂಬಲ

Talapadi: ತಲಪಾಡಿ ಗಡಿಯಲ್ಲಿ ಕೇರಳ ಲಾಟರಿ ಮಾರಟಗಾರರಿಗೆ ಸರ್ವ ಪಕ್ಷ ನೈತಿಕ‌ ಬೆಂಬಲ


ಮಂಜೇಶ್ವರ: ತಲಪಾಡಿ ಗಡಿಯ ಕೇರಳ ಸರಹದ್ದಿನಲ್ಲಿ ರಾಜ್ಯ ಲಾಟರಿ ಮಾರಾಟ ಮಾಡುತ್ತಿದ್ದ ಗೂಡಂಗಡಿಗಳನ್ಬು ಕರ್ನಾಟಕದ ಕೆಲವರು ಎಬ್ಬಿಸಲು ನಡೆಸಿದ ಷಡ್ಯಂತ್ರದ ವಿರುದ್ಧ ಸ್ಥಳೀಯ ಪಂಚಾಯತು ಪ್ರತಿನಿಧಿಗಳು, ಸರ್ವ ಪಕ್ಷದ ನಾಯಕರು ಮುಂಚೂಣಿಗೆ ಬರುವ ಮೂಲಕ ನೈತಿಕ ಬೆಂಬಲ ಘೋಷಿಸಿದ್ದು ಲಾಟರಿ ಮಾರಾಟ ಮಾಡಿ ಬದುಕುವ ಬಡ ಕುಟುಂಬಗಳು ನಿಟ್ಟುಸಿರು ಬಿಡುವಂತಾಗಿದೆ. 

ಘಟನೆಯ ವಿವರ: 

ತಲಪಾಡಿ ಗಡಿಭಾಗದ ಕೇರಳ ರಾಜ್ಯಕ್ಕೆ ಸೇರಿಕೊಂಡಿರುವ ಸ್ಥಳದಲ್ಲಿ ಮಂಜೇಶ್ವರ ಅಸುಪಾಸಿನ ಜನರು ಗೂಡಂಗಡಿ ಇರಿಸಿ ಕೇರಳ ರಾಜ್ಯ ಲಾಟರಿ ಮಾರಾಟ ಮಾಡುತ್ತಿದ್ದರು. ನೆರೆಯ ಕರ್ನಾಟಕ ರಾಜ್ಯ ಸಹಿತ ವಿವಿದೆಡೆಯ ಜನ ಇಲ್ಲಿಗೆ ತಲುಪಿ ಲಾಟರಿ ಖರೀದಿಸುತ್ತಿದ್ದು ಇದರಿಂದಾಗಿ ಲಾಟರಿ ಮಾರಾಟಗಾರರ ಕುಟುಂಬ ಒಪ್ಪೊತ್ತಿನ ಊಟಕ್ಕೆ ತಾತ್ವರವಿಲ್ಲದೆ ಬದುಕುತ್ತಿದ್ದರು. ಇದನ್ನು ನೋಡಿ ಸಹಿಸದ ಕೆಲವು ಸ್ಥಾಪಿತ ಹಿತಾಸಕ್ತಿಗಳು ಲಾಟರಿ ಮಾರಾಟಗಾರರಿಗೆ ನಿರ್ಬಂಧ ಹೇರಿದ್ದು ಮಾರಟ ನಿಲ್ಲಿಸುವಂತೆಯೂ ಇಲ್ಲದಿದ್ದರೆ ಗೂಡಂಗಡಿಯನ್ನು ತೆರವುಗೊಳಿಸುವ ಬಗ್ಗೆ ತಾಕೀತು ನೀಡಿದ್ದರು. ಇದು ಸ್ಥಳೀಯ ಲಾಟರಿ ಮಾರಾಟಗಾರರಲ್ಲಿ ಆತಂಕ ಸೃಷ್ಟಿಸಿದ್ದು ಇದನ್ನರಿತು ಕೆಲವು ಪಕ್ಷದ ಪ್ರಮುಖರು ಸ್ಥಳಕ್ಕೆ ಆಗಮಿಸಿ ನೈತಿಕ‌ ಬೆಂಬಲ ಘೋಷಿಸಿದ್ದರು. ಈ ನಡುವೆ ಕೇರಳ ಕರ್ನಾಟಕದ ಪೋಲಿಸ್ ಇಲಾಖೆಗೂ ಈ ಬಗ್ಗೆ ಮನವರಿಕೆ ಮಾಡಿ ಲಾಟರಿ ಮಾರಾಟಕ್ಕೆ ಎದುರಾದ ಆತಂಕವನ್ನು ದೂರಿಕರಿಸಲಾಗಿತ್ತು. ಉಭವ ಜಿಲ್ಲಾಧಿಕಾರಿಗಳಿಗೆ ಮತ್ತು ಸ್ಥಳೀಯಾಡಳಿತ ಸಂಸ್ಥೆಗೆ ಈ ಬಗ್ಗೆ ಮಾಹಿತಿ ‌ನೀಡಲಾಗಿದ್ದು ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷೆ ಜೀನ್ ಲವೀನಾ ಮೊಂತೆರೋ, ಉಪಾಧ್ಯಕ್ಷ ಓಂಕೃಷ್ಣ,ಮಾಜಿ ಜಿ.ಪಂ.ಸದಸ್ಯ ಹರ್ಷಾದ್ ವರ್ಕಾಡಿ,ಮಂಜೇಶ್ವರ ಗ್ರಾ.ಪಂ. ಸದಸ್ಯ ಮುಸ್ತಾಪ, ಎಡರಂಗದ ಯುವ ನೇತಾರ ಪ್ರಶಾಂತ್ ಕನಿಲ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದ್ದರು. ಲಾನ್ಸಿ ಡಿಸೋಜ ತೂಮಿನಾಡು,ಸುಕೇಶ್ ಬೆಜ್ಜ , ಶಶಿ ವಿ, ವಿಜಯನ್, ಭಾಸ್ಕರ್ ಶೆಟ್ಟಿಗಾರ್, ಶ್ರೀಧರ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article