ಭೂ ಕುಸಿತ ಮಂಗಳೂರು-ಬೆಂಗಳೂರು ರೈಲು ರದ್ದು

ಭೂ ಕುಸಿತ ಮಂಗಳೂರು-ಬೆಂಗಳೂರು ರೈಲು ರದ್ದು

ಮಂಗಳೂರು: ಸಕಲೇಶಪುರ ಬಳಿಯ ಎಡಕುಮೇರಿ- ಕಡಗರವಳ್ಳಿ ಮಧ್ಯೆ ರೈಲು ಹಳಿಗೆ ಭೂಕುಸಿತವಾಗಿರುವುದರಿಂದ ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ಅಸ್ತವ್ಯಸ್ತವಾಗಿದೆ. ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದ್ದಂತೆಯೇ ಈ ಹಾದಿಯಲ್ಲಿ ಸಾಗುವ ಜು.29ರ ವರೆಗಿನ ಎಂಟು ರೈಲುಗಳನ್ನು ರದ್ದುಪಡಿಸಲಾಗಿದೆ ಎಂದು ದಕ್ಷಿಣ ರೈಲ್ವೇಯ ಸಾರ್ವಜನಿಕ ಸಂಪರ್ಕಾಧಿಕಾರಿ ದೇವದಾನಂ ತಿಳಿಸಿದ್ದಾರೆ. 

ಜು.27ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ವಿಜಯಪುರಕ್ಕೆ ತೆರಳಬೇಕಿದ್ದ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲನ್ನು (ಸಂಖ್ಯೆ 07378) ರದ್ದುಪಡಿಸಲಾಗಿದೆ. ಜು. 28ರಂದು ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಬೆಂಗಳೂರು ಯಶವಂತಪುರಕ್ಕೆ ತೆರಳಬೇಕಿದ್ದ ಪ್ಯಾಸೆಂಜರ್ ರೈಲು (ಸಂಖ್ಯೆ 16540) ರದ್ದಾಗಿದೆ. ರೈಲು ಸಂಖ್ಯೆ 07377 ವಿಜಯಪುರದಿಂದ ಮಂಗಳೂರು ಸೆಂಟ್ರಲ್ ನಿಲ್ದಾಣ ಮಧ್ಯೆ ಜು. 27ರಂದು ಓಡಾಟ ನಡೆಸಬೇಕಿದ್ದ ರೈಲನ್ನು  ರದ್ದುಪಡಿಸಲಾಗಿದೆ. 28ರಂದು ಬೆಂಗಳೂರಿನಿಂದ ಕಾರವಾರಕ್ಕೆ ತೆರಳುವ ಸ್ಪೆಷಲ್ ಎಕ್ಸ್ ಪ್ರೆಸ್ (ಸಂಖ್ಯೆ 06567) ರೈಲನ್ನು  ರದ್ದು ಮಾಡಲಾಗಿದೆ. ಜು. 28ರಂದು ಮುರುಡೇಶ್ವರದಿಂದ ಬೆಂಗಳೂರು ತೆರಳಬೇಕಿದ್ದ 16586 ನಂಬರಿನ ರೈಲನ್ನು ರದ್ದು ಮಾಡಲಾಗಿದೆ. ಜು. 28ರಂದು ಯಶವಂತಪುರ-ಮಂಗಳೂರು ಜಂಕ್ಷನ್ ಮಧ್ಯೆ ಸಂಚರಿಸುವ (ಸಂಖ್ಯೆ 16575) ರೈಲನ್ನೂ ರದ್ದುಪಡಿಸಲಾಗಿದೆ. ಜುಲೈ 29ರಂದು ಸಂಚರಿಸುವ ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್ ನಡುವಿನ ರೈಲನ್ನು ರದ್ದು ಮಾಡಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article