
Mangalore: ಹಿಂದಿನ ಸಂಸ್ಕೃತಿ ಹಾಗೂ ಕ್ರೀಡೆಯನ್ನು ಉಳಿಸಬೇಕು: ಡಾ. ವೈ. ಭರತ್ ಶೆಟ್ಟಿ
ಮಂಗಳೂರು: ಹಿಂದಿನ ಕಾಲ ಘಟ್ಟದಲ್ಲಿನ ಅಚಾರ ವಿಚಾರ, ಸಂಸ್ಕೃತಿ ಹಾಗೂ ಕ್ರೀಡೆಗಳನ್ನು ಉಳಿಸುವಲ್ಲಿ ನಮ್ಮೆಲ್ಲರ ಪಾತ್ರ ಮಹತ್ವದ್ದಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿದರು.
ಅವರು ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಗಣೇಶಪುರ ಮತ್ತು ಹಿಂದು ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ ಕ್ಷೇತ್ರ, ಕ್ರೀಡಾ ಭಾರತಿ ಮಂಗಳೂರು, ಯುವಕ ಮಂಡಲ 5ನೇ ವಿಭಾಗ ಕೃಷ್ಣಾಪುರ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕೃಷ್ಣಾಪುರ ದಿ.ನಾರಾಯಣ ಶೆಟ್ಟಿ ಮತ್ತು ಮಕ್ಕಳು ಇವರ ಗದ್ದೆಯಲ್ಲಿ ನಡೆದ ಕೃಷ್ಣಾಪುರ ಕೆಸರು ಗದ್ದೆ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ನಡೆಸುತ್ತಿರುವ ಕ್ರೀಡೋತ್ಸವವನ್ನು ನಗರ ಪ್ರದೇಶದಲ್ಲಿ ಹಮ್ಮಿಕೊಂಡು ನಗರ ಪ್ರದೇಶದ ಜನರಿಗೆ ಇದರಿಂದ ಉಪಯೋಗವಾಗುವ ರೀತಿ ಕಾರ್ಯಕ್ರಮ ಅಯೋಜಿಸಿದ ಸಂಘ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು.
ಇಂತಹ ಕ್ರೀಡೆಗಳನ್ನು ಹಾಗೂ ಹಿಂದಿನ ಕಾಲದ ಅಹಾರ ಪದ್ದತಿಯನ್ನು ಉಳಿಸುವಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದರು.
ಮಂಗಳೂರು ನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಸಚಿವ ಹಾಗೂ ಕರ್ನಾಟಕ ಕ್ರೀಡಾ ಭಾರತಿ ಉಪಾಧ್ಯಕ್ಷ ನಾಗರಾಜ್ ಶೆಟ್ಟಿ, ಕ್ರೀಡಾ ಭಾರತಿ ಕ್ಷೇತ್ರಿಯ ಸಂಯೋಜಕ ಚಂದ್ರಶೇಖರ್ ಜಾಗೀರ್ದಾರ್, ಕ್ರೀಡಾ ಭಾರತಿ ರಾಜ್ಯ ಕಾರ್ಯಕಾರಿಣಿ ಸದಸ್ಯರು ಭೋಜರಾಜ್ ಕಲ್ಕಡ, ಕ್ರೀಡಾ ಭಾರತಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಕಾರ್ಯಪ್ಪ ರೈ, ಮನಪಾ ಸದಸ್ಯರಾದ ಲಕ್ಷ್ಮಿ ಶೇಖರ ದೇವಾಡಿಗ, ಮನಪಾ ಸದಸ್ಯ ಲೋಕೇಶ್ ಬೊಳ್ಳಾಜೆ, ದಕ್ಷಿಣ ಕನ್ನಡ ಜಿಲ್ಲಾ ಯುವಮೋರ್ಚ ಪ್ರಧಾನ ಕಾರ್ಯದರ್ಶಿ ಭರತ್ ರಾಜ್ ಕೃಷ್ಣಾಪುರ, ವಕೀಲರಾದ ಸದಾಶಿವ ಐತಾಳ್, ಎಂ.ಅರ್.ಪಿ.ಎಲ್. ಧನಲಕ್ಷ್ಮಿ ಕನ್‌ಸ್ಟ್ರಕ್ಷನ್ ಮಾಲಕ ರಾಜರಾಮ್ ಸಾಲ್ಯಾನ್, ಕಾಟಿಪಳ್ಳ ಬ್ರಹ್ಮಶ್ರೀ ನಾರಯಣ ಗುರು ಸಮಾಜ ಸೇವಾ ಸಂಘ ಅಧ್ಯಕ್ಷ ದೇವೆಂದ್ರ ಕೋಟ್ಯಾನ್, ಮಂಗಳೂರು ಹಿಮಾಲಯ ರೋಡ್ ಲೈನ್ಸ್ ಮಾಲಕರಾದ ಅಶೋಕ್, ಸುಂದರ ಬಂಗೇರ ಕೃಷ್ಣಾಪುರ, ಉದ್ಯಮಿ ಪ್ರಸಾದ್ ಶೆಟ್ಟಿ ಹನುಮನಗರ, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಕೃಷ್ಣಾಪುರ ಅಧ್ಯಕ್ಷ ವಿವೇಕ್ ಅಚಾರ್ಯ, ಉದ್ಯಮಿ ಸುಧಾಕರ ಶೆಟ್ಟಿ ಕೃಷ್ಣಾಪುರ, ಭಾಸ್ಕರ್ ಕುಲಾಲ್ ನಂದನವನ, ದೀಪಕ್ ಅತ್ತಾವರ ನಂದನವನ, ಜಯ ಶೆಟ್ಟಿ ಕೃಷ್ಣಾಪುರ, ಸುಧಾಕರ ಕಾಮತ್, ಹಿಂದು ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ ಅಧ್ಯಕ್ಷ ಜಯಪ್ರಕಾಶ್ ಸೂರಿಂಜೆ, ಮಾಜಿ ಅಧ್ಯಕ್ಷ ವಾದಿರಾಜ್ ರಾವ್, ಉಪಾಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಕಾರ್ಯದರ್ಶಿ ಭರತ್ ಕುತ್ತೆತ್ತೂರು, ಕೋಶಾಧಿಕಾರಿ ಪುಷ್ಷರಾಜ್ ಕಣ್ವತೀರ್ಥ, ಜಯಶೀಲ ಸೂರಿಂಜೆ, ಪ್ರವೀಣ್ ಕೃಷ್ಣಾಪುರ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲಾ ಬಿಜೆಪಿ ಉಪಾಧ್ಯಕ್ಷ ತಿಲಕ್‌ರಾಜ್ ಕೃಷ್ಣಾಪುರ ವಹಿಸಿದ್ದರು. ಪ್ರಶಾಂತ್ ಮುಡಾಯಿಕೋಡಿ ಸ್ವಾಗತಿಸಿ, ರಾಕೇಶ್ ಕೃಷ್ಣಾಪುರ ವಂದಿಸಿದರು.