ದ.ಕ. ಜಿಲ್ಲೆಯಲ್ಲಿ ಬಿಡುವುಕೊಟ್ಟ ಮಳೆ: ಎಂದಿನಂತೆ ಮುಂದುವರೆದ ಸಂಚಾರ

ದ.ಕ. ಜಿಲ್ಲೆಯಲ್ಲಿ ಬಿಡುವುಕೊಟ್ಟ ಮಳೆ: ಎಂದಿನಂತೆ ಮುಂದುವರೆದ ಸಂಚಾರ

ಮಂಗಳೂರು: ಜಿಲ್ಲೆಯಾಧ್ಯಂತ ವಾಹನ ಸಂಚಾರ ನಡೆಯುತ್ತಿದೆ. ಮಂಗಳೂರು-ಬೆಂಗಳೂರು ಸಂಪರ್ಕದ ಪ್ರಮುಖ ಕೊಂಡಿ ಶಿರಾಡಿ ಘಾಟಿಯಲ್ಲಿ ಹಗಲಿನ ವೇಲೆ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ. ರಾತ್ರಿ ವೇಳೆ ನಿರ್ಬಂಧ ಮುಂದುವರಿದಿದೆ.

ಮಂಗಳೂರು-ಮಡಿಕೇರಿ ಘಾಟಿ ಕೂಡ ನಿರ್ಬಂಧ ಮುಂದುವರಿದಿದೆ. ಶಿರಾಡಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದ್ದಾಕ್ಕಾಗಿ ಚಾರ್ಮಾಡಿ ಘಾಟ್ ಮೇಲೆ ತುಸು ಒತ್ತಡ ಕಡಿಮೆಯಾಗಿದೆ.

ವಿಮಾನ ಹಾಗೂ ರೈಲು ಸಂಚಾರ ಎಂದಿನಂತಿದೆ. ಮಂಗಳೂರು-ಬೆಂಗಳೂರು ನಡುವೆ ಹೆಚ್ಚುವರಿಯಾಗಿ ಎರಡು ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಆಂಕೋಲಾ ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ಮಂಗಳೂರು-ಗೋವಾ ನಡುವಿನ ಸಂಚಾರ ವ್ಯತ್ಯಾಯವಾಗಿದೆ. ಆದ್ದರಿಂದ ಮಂಗಳೂರು-ಮಡಘಾಂವ್ ನಡುವೆ ಹೆಚ್ಚುವರಿ ರೈಲು ಓಡುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article