ಖಾಸಗಿ ಚಾನೆಲ್ ನ ಕ್ಯಾಮರಾಮೆನ್ ವಿರೇಶ್ ಕಡ್ಲಿಕೊಪ್ಪ ನಿಧನ
Saturday, July 20, 2024
ಮಂಗಳೂರು: ಖಾಸಗಿ ಚಾನೆಲ್ ನ ಕ್ಯಾಮರಾಮೆನ್ ವಿರೇಶ್ ಕಡ್ಲಿಕೊಪ್ಪ ಇಂದು ನಿಧನರಾಗಿದ್ದಾರೆ.
ಮೂಲತಃ ಗದಗ ಜಿಲ್ಲೆಯ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದವರಾಗಿದ್ದ ವಿರೇಶ್ ಕಳೆದ ಹಲವಾರು ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಮಂಗಳೂರಿನ ಖಾಸಗಿ ಚಾನೆಲ್‌ನಲ್ಲಿ ಉದ್ಯೋಗಿಯಾಗಿದ್ದ ಅವರು ಇತ್ತೀಚೆಗೆ ಟಿವಿ 5 ಚಾನೆಲ್‌ಗೆ ಸೇರಿದ್ದರು.
ಜು.7 ರಂದು ಹುಟ್ಟು ಹಬ್ಬ ಹಾಗೂ ಊರ ಜಾತ್ರೆಯಲ್ಲಿ ಭಾಗವಹಿಸಲು ಊರಿಗೆ ತೆರಳಿದ್ದ ವಿರೇಶ್ ನಿಧನರಾಗಿದ್ದಾರೆ. ನಿಧನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ವಿರೇಶ್ ಆಗಲಿಕೆಗೆ ಮಂಗಳೂರಿನ ಪತ್ರಕರ್ತರು ಕಂಬನಿ ಮಿಡಿದಿದ್ದಾರೆ.