Mangalore: ದ.ಕ.ದ ರೈಲ್ವೆ ಸಮಸ್ಯೆಗಳ ಕುರಿತು ಮಂಗಳೂರಿನಲ್ಲಿ ಸಭೆ ನಡೆಸಲು ಸಚಿವರಲ್ಲಿ ಮನವಿ ಮಾಡಿದ ಸಂಸದರು

Mangalore: ದ.ಕ.ದ ರೈಲ್ವೆ ಸಮಸ್ಯೆಗಳ ಕುರಿತು ಮಂಗಳೂರಿನಲ್ಲಿ ಸಭೆ ನಡೆಸಲು ಸಚಿವರಲ್ಲಿ ಮನವಿ ಮಾಡಿದ ಸಂಸದರು


ಮಂಗಳೂರು: ದಕ್ಷಿಣ ಕನ್ನಡದ ನಾಗರಿಕರ ಪರವಾಗಿ ಮತ್ತು ವಿಶೇಷವಾಗಿ ರೈಲು ಪ್ರಯಾಣಿಕರ ಪರವಾಗಿ, ನಮ್ಮ ಜಿಲ್ಲೆಯ ರೈಲ್ವೆ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ. ಸೋಮಣ್ಣ ಅವರನ್ನು ಮಂಗಳೂರಿನಲ್ಲಿ ಸಭೆ ನಡೆಸುವಂತೆ ಜಿಲ್ಲೆಯ ಸಂಸದ ಕ್ಯಾ. ಬ್ರಿಜೇಶ್ ಚೌಟ ಪತ್ರ ಬರೆದು ವಿನಂತಿಸಿದ್ದಾರೆ.

ಕೊಂಕಣ ರೈಲ್ವೆ ಮತ್ತು ಭಾರತೀಯ ರೈಲ್ವೆಯ ವಿಲೀನ:

ಇದು ಕೊಂಕಣ ಭಾಗದಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಬಹುಕಾಲದ ಬೇಡಿಕೆ. ಕೊಂಕಣ ರೈಲ್ವೆ ನಿಗಮ ಲಿಮಿಟೆಡ್ (ಕೆಆರ್‌ಸಿಎಲ್) ಸ್ವತಂತ್ರ ಸಂಸ್ಥೆಯಾಗಿ ಎದುರಿಸುತ್ತಿರುವ ಹಣಕಾಸು ಅಡಚಣೆಗಳನ್ನು, ಇತರ ವಲಯಗಳಿಂದ ಮುಖ್ಯ ರೈಲ್ವೆ ಮೂಲಸೌಕರ್ಯಗಳ ಅವಲಂಬನೆಯನ್ನು ನಿವಾರಿಸಲು, ಈ ವಿಲೀನ ಅತೀ ಅವಶ್ಯವಾಗಿದೆ.

ಮಂಗಳೂರು-ಬೆಂಗಳೂರು ರೈಲ್ವೆ ಮಾರ್ಗದ ಉನ್ನತೀಕರಣ: 

ಶಿರಾಡಿ ಘಾಟ್ ಭಾಗದ ಕಾರ್ಯಯೋಜನಾ ಅಧ್ಯಯನ ಅಗತ್ಯವಿದ್ದು, ಇದರಿಂದ ಮಂಗಳೂರು ಮತ್ತು ಬೆಂಗಳೂರು ನಡುವಿನ ಸರಕು ಮತ್ತು ಪ್ರಯಾಣಿಕರ ಸಾಗಣೆ ಸುಗಮಗೊಳ್ಳುತ್ತದೆ. ಈ ನಡುವೆ, ಸುಬ್ರಹ್ಮಣ್ಯದಿಂದ ಸಕಲೇಶಪುರದ ಘಾಟ್ ಭಾಗದ ಸಾಮರ್ಥ್ಯ ವೃದ್ಧಿಗಾಗಿ ಅಗತ್ಯ ಸೈಡಿಂಗ್ ಒದಗಿಸಲು ಕ್ರಮಗಳನ್ನು ಕೈಗೊಳ್ಳುವುದು ಎಂದು ಸಭೆಯಲ್ಲಿ ಸರ್ಚಿಸಲು ಇರುವ ಪ್ರಮುಖ ಅಂಶಗಳು.

ಜಿಲ್ಲೆಯ ಎಲ್ಲಾ ಶಾಸಕರು, ಸೌತರ‍್ನ್ ರೈಲ್ವೇ, ಸೌತರ‍್ನ್ ವೆಸ್ಟರ‍್ನ್ ರೈಲ್ವೇ, ಕೊಂಕಣ್ ರೈಲ್ವೇ, ಮಂಗಳೂರು ಸಿಟಿ ಕಾರ್ಪೊರೇಷನ್, ಜಿಲ್ಲಾ ಆಡಳಿತ ಡಿಸ್ಟಿಕ್, ಪಿಡ್ಲ್ಯೂಡಿ ಇಲಾಖೆ, ಅರಣ್ಯ ಇಲಾಖೆ ಮತ್ತಿತರ ಸಂಬಂಧಿತ ಇಲಾಖೆಗಳನ್ನು ಒಟ್ಟು ಸೇರಿಸಿ ಮಂಗಳೂರಿನಲ್ಲಿ ಸಭೆಯನ್ನು ಮಾಡಲು ಉದ್ದೇಶಿಸಿದ್ದು ಈ ಸಭೆಯಲ್ಲಿ ಸಚಿವರು ಉಪಸ್ಥಿತರಿರುವಂತೆ ವಿನಂತಿಸಿ ಅವರ ಸಮಯಕ್ಕಾಗಿ ಸಂಸದರು ಪತ್ರ ಬರೆದಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article