.png)
Bantwal: ಟೆಲಿಗ್ರಾಂ ಆಪ್ ಮೂಲಕ ಟ್ರೇಡಿಂಗ್ ಲಕ್ಷಾಂತರ ರೂ. ಕಳಕೊಂಡ ಮಹಿಳೆ
Thursday, July 11, 2024
ಬಂಟ್ವಾಳ: ಟೆಲಿಗ್ರಾಂ ಆಪ್ ಮೂಲಕ ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಬಂಟ್ವಾಳದ ಮಹಿಳೆಯೋರ್ವರಿಗೆ ಟ್ರೇಡಿಂಗ್ ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2023 ರ ಡಿ.15 ರಂದು ಟೆಲಿಗ್ರಾಂ ಮೂಲಕ ಅಮನ್ ಗೊಂಡ ಎಂದು ಮಹಿಳೆಯನ್ನು ಪರಿಚಯಿಸಿಕೊಂಡ ವ್ಯಕ್ತಿ ಟ್ರೇಡಿಂಗ್ ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂಬುದಾಗಿ ತಿಳಿಸಿರುತ್ತಾನೆ.
ಅದರಂತೆ ಮಹಿಳೆ ಏಜೆಂಟ್ ಕೆನ್ ಎಂದು ತನ್ನನ್ನು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 10 ಲಕ್ಷ ರೂ. ಹಣವನ್ನು ತನ್ನ ಬ್ಯಾಂಕ್ ಖಾತೆಯಿಂದ ವರ್ಗಾಯಿಸಿರುತ್ತಾರೆ.
ಇದೀಗ ಈ ಹಣವನ್ನು ಹಿಂತಿರುಗಿಸದೇ, ಮೋಸದ ಜಾಲತಾಣದ ಮೂಲಕ ವಂಚನೆ ಮಾಡಿರುತ್ತಾನೆ ಎಂದು ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.