Putturu: ಕಬಕ-ಕುಳದಲ್ಲಿ ‘ಚಿರತೆ’ ವದಂತಿ..!-ಅರಣ್ಯ ಇಲಾಖೆ ಪರಿಶೀಲನೆ

Putturu: ಕಬಕ-ಕುಳದಲ್ಲಿ ‘ಚಿರತೆ’ ವದಂತಿ..!-ಅರಣ್ಯ ಇಲಾಖೆ ಪರಿಶೀಲನೆ


ಪುತ್ತೂರು: ಪುತ್ತೂರು ನಗರದ ಹೊರವಲಯದಲ್ಲಿರುವ ಕಬಕ ಕುಳ ಪ್ರದೇಶದಲ್ಲಿ ಬುಧವಾರ ರಾತ್ರಿ ವೇಳೆ ಚಿರತೆಯೊಂದು ಕಂಡು ಬಂದಿರುವ ಬಗ್ಗೆ ವದಂತಿ ಹರಡಿದ್ದು, ಈ ಬಗ್ಗೆ ಸ್ಥಳೀಯರೊಬ್ಬರು ಚಿರತೆಯನ್ನು ಕಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಪರಿಶೀಲನೆ ನಡೆಸುತ್ತಿದೆ. 

ಕಬಕ-ವಿಟ್ಲ ರಸ್ತೆಯ ಅಂಗನವಾಡಿಯ ಪಕ್ಕದಲ್ಲಿ ಹತ್ತಾರು ನಾಯಿಗಳ ಬೊಗಳುವಿಕೆಯಿಂದ ಸ್ಥಳೀಯರಾದ ಮೂಸಾ ಎಂಬವರು ಎದ್ದು ನೋಡಿದಾಗ ಚಿರತೆ ಕಂಡುಬಂದಿದೆ. ತಕ್ಷಣ ಅವರು ತಮ್ಮ ಪತ್ನಿಗೆ ಈ ವಿಚಾರ ತಿಳಿಸಿದ್ದಾರೆ. ಇಬ್ಬರೂ ತಮ್ಮ ಮನೆಯ ಕಿಟಕಿಯಿಂದ ಚಿರತೆ ಓಡುವುದನ್ನು ಕಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅಕ್ಕಪಕ್ಕದ ಮನೆಯಗಳಿಗೂ ಮಾಹಿತಿ ನೀಡಿದ ಮೂಸಾ ಮನೆಯಿಂದ ಯಾರೂ ಹೊರಬರಬೇಡಿ ಎಂದು ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಈ ಸುದ್ದಿಯಿಂದ ಕುಳ ಭಾಗದ ಕುಟುಂಬಗಳು ಮನೆಯಿಂದ ಹೊರಬರಲು ಭಯ ಪಡುವಂತಾಗಿದೆ. ಕೆಲ ಮನೆಗಳ ಬಳಿ ಚಿರತೆಯ ಹೆಜ್ಜೆಯನ್ನು ಹೋಲುವ ಗುರುತು ಪತ್ತೆಯಾಗಿರುವುದು ಜನತೆಯನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. 

ಇದೀಗ ಈ ಘಟನೆಯ ಸತ್ಯಾಸತ್ಯತೆಯನ್ನು ತಿಳಿಯಲು ಅರಣ್ಯ ಇಲಾಖೆ ಮುಂದಾಗಿದೆ. ಅರಣ್ಯ ಇಲಾಖೆಯ ಸಿಬಂದಿಗಳು ಈ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಗುರುವಾರ ರಾತ್ರಿ ಈ ಭಾಗದಲ್ಲಿ ಕಾವಲು ಹಾಕುವ ಮೂಲಕ ಚಿರತೆ ಇರುವಿಕೆಯ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ ಎಂದು ಪುತ್ತೂರು ವಿಭಾಗ ಅರಣ್ಯಾಧಿಕಾರಿ ಕಿರಣ್ ಬಿ.ಎಂ ಮಾಹಿತಿ ನೀಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article