.jpeg)
Mangalore: ಪೇಜಾವರ ಶ್ರೀಗಳಿಗೆ ಗುರು ಪರಂಪರೆಯನ್ನು ನೆನಪಿಸಿದ ಎಂ.ಜಿ.ಹೆಗಡೆ
ಮಂಗಳೂರು: ಗುರು ಪರಂಪರೆಯಲ್ಲಿ ಸತ್ಯ ಮತ್ತು ಧರ್ಮದ ಮಾರ್ಗವನ್ನು ತಿಳಿದು ಪ್ರವಚನ ಮಾಡಬೇಕು ಆದರೆ ಇಲ್ಲಿ ಪ್ರೇಜಾವರ ಶ್ರೀಗಳು ಅಂತಹ ಶ್ರೇಷ್ಠ ಪರಂಪರೆಯನ್ನು ಮರೆಯು ಸಂಪೂರ್ಣ ಬಿಜೆಪಿ ಮಯ ಮಾಡಿಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಎಂ.ಜಿ. ಹೆಗಡೆ ಅವರು ಗುರು ಪರಂಪರೆಯನ್ನು ನೆನಪಿಸಿದರು.
ಅವರು ಜು.6 ರಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿಯವರ ಬಗ್ಗೆ ಹೇಳಿಕೆ ನೀಡಿರುವ ಪ್ರೇಜಾವರ ಶ್ರೀಗಳಿಗೆ ಅವರು ಪ್ರಶನಿಸಿದರು.
ಬ್ರಹಸ್ಪತಿ ಗಾಯತ್ರಿ ಮಂತ್ರ, ಉಪನಿಷತ್ತುಗಳ ಶಾಂತಿಮಂತ್ರ, ಋಗ್ವೇದದ ಋಕ್ಕುಗಳನ್ನು ಪಠಣಮಾಡುತ್ತಾ, ಗುರುವೆಂದರೆ ಸತ್ಯದ ಬಗ್ಗೆ ತಾನು ತಿಳಿದುಕೊಂಡು ಮತ್ತೊಬ್ಬರಿಗೆ ಬೋಧನೆ ಮಾಡಬೇಕು ಎಂದು ತಿಳಿಸಿದರು. ಗುರುಪೀಠದಲ್ಲಿದ್ದವರು ಎಲ್ಲಾ ರಾಜಕೀಯ ಪಕ್ಷಗಳನ್ನು ಠೀಕೆ ಮಾಡಬೇಕು. ಒಟ್ಟು ಹಿಂದೂಸಮಾಜವೆಂದರೆ ಬಿಜೆಪಿಯಲ್ಲ ಎಂಬ ರಾಹುಲ್ ಗಾಂಧಿಯವರ ಹೇಳಿಕೆಯಲ್ಲಿ ತಪ್ಪೇನಿದೆ. ಹಾಗಾದರೆ ಬಿಜೆಪಿಯೆಂದರೆ ಒಟ್ಟು ಹಿಂದೂ ಸಮಾಜವೆಂದು ಪೇಜಾವರ ಶ್ರೀಗಳು ಒಪ್ಪುತ್ತಾರೆಯೇ?. ಹಾಗಾದರೆ ನಾವೆಲ್ಲಾ ಯಾರು? ಎಂದು ಪ್ರಶ್ನಿಸಿದರು.
ಗುರುವಿನ ಸ್ಥಾನದಲ್ಲಿರುವವರು ನಿರ್ದೇಶನ, ಮಾರ್ಗದರ್ಶನ, ಸಲಹೆಗಳನ್ನು ನೀಡಬೇಕೇ ಹೊರತು ರಾಜಕೀಯ ಮಾಡುವುದಲ್ಲ. ಪೇಜಾವರ ಶ್ರೀಗಳು ರಾಮಮಂದಿರದಿಂದ ಮಂತ್ರಾಕ್ಷತೆ ಎಂದು ಎಲ್ಲರಿಗೆ ಕಳುಹಿಸಿದರು. ಅದು ಮಂತ್ರಾಕ್ಷತೆಯಲ್ಲ, ಬರಿಯ ಅಕ್ಷತೆ. ರಾಮಮಂದಿರ ಅಪೂರ್ಣವೆಂದು ನಾವು ಹೇಳಿದ್ದಲ್ಲ ಶಂಕರಪೀಠದ ಸ್ವಾಮೀಜಿಗಳು ಹೇಳಿದ್ದು. ಅದು ಹಿಂದೂ ಸಮಾಜದ ಧ್ವನಿಯಲ್ಲವೇ? ಎಂದು ಪ್ರಶ್ನಿಸಿದರು.
ಈಗಾಗಲೇ ರಾಮ ಮಂದಿರ ಸೋರುತ್ತಿದೆ ಅದರ ಬಗ್ಗೆ ಕೇಳಿದರೆ ಮೋಲಂತಸ್ತು ಸರಿಯಾದ ನಂತರ ಸರಿಯಾಗುತ್ತಾರೆ ಎಂದು ಹೇಳಿಕೆ ನೀಡುತ್ತಿದ್ದು, ಕಟ್ಟಡ ಕಾಮಗಾರಿ ಪೂರ್ಣಗೊಳ್ಳದಿದ್ದರೂ, ಪೇಜಾವರ ಶ್ರೀಗಳಿಗೆ ಮೋದಿಯವರ ಪಕ್ಕದಲ್ಲಿ ನಿಂತ ಒಬ್ಬರದ್ದೇ ಫೋಟೊ ಬರುವುದಕ್ಕಾಗಿ ಉದ್ಘಾಟನೆ ಮಾಡಿದ್ದಾರೆ. ಬೇರೆ ಗುರುಗಳನ್ನು ಹೊರಗೆ ಕೂರಿಸಿ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ದೂರಿದ ಅವರು ಉಡುಪಿ ಅಷ್ಟಮಠಗಳ ೨ ಪಂಚಾಂಗಗಳನ್ನು ತೆಗೆದು ಹಾಕಲಿ. ಶೀರೂರು ಶ್ರೀಗಳ ಪಾರ್ಥಿವ ಶರೀರವನ್ನು ರಥಬೀದಿಗೆ ತರಲು ಬಿಡದಿದ್ದು ಯಾರು? ಎಂದು ಪೇಜಾವರ ಶ್ರೀಗಳನ್ನು ಪ್ರಶ್ನಿಸಿದ್ದಾರೆ.
ಸಂವಿಧಾನದಲ್ಲಿ ಎಷ್ಟು ಪುಟಗಳಿವೆ ಎಂದು ಪ್ರಶ್ನಿಸುವ ಪೇಜಾವರ ಶ್ರೀಗಳು ರಾಮಾಯಣ ಹಾಗೂ ಮಹಾಭಾರತದಲ್ಲಿ ಎಷ್ಟು ಪುಟಗಳಿವೆ ಎಂದು ಹೇಳಿ? ಯಾವ ಯಾವ ಭಾಷೆಯಲ್ಲಿ ಮುದ್ರಿಸುತ್ತಾರೆ ಆ ಭಾಷೆಗೆ ತಕ್ಕಂತೆ ಪುಟಗಳು ಹೆಚ್ಚಾಗುತ್ತವೆ ಎಂದು ಹೇಳಿದರು.
ಪೇಜಾವರ ಶ್ರೀಗಳು ಕೇವಲ ಹಿಂದುತ್ವದ ಬಗ್ಗೆ ಕಾಂಗ್ರೆಸ್ ಪ್ರಶ್ನಿಸುವ ಬದಲು ದೇಶದಲ್ಲಿ ಕುಸಿದು ಬೀಳುತ್ತಿರುವ ಸೇತುವೆಗಳು, ಸೋರುತ್ತಿರುವ ಆಸ್ಪತ್ರೆಗಳು, ನೀಟ್ ಪರೀಕ್ಷೆಯ ಪ್ರಶ್ನಪತ್ರಿಕೆಯ ಬಗ್ಗೆ ಯಾಕೆ ಪ್ರಶ್ನಿಸುತ್ತಿಲ್ಲ ಎಂದು ಕೇಳಿದರು.