Manjeswara: ಧಾರಕಾರ ಮಳೆ-ಬಾವಿ ಕುಸಿತ

Manjeswara: ಧಾರಕಾರ ಮಳೆ-ಬಾವಿ ಕುಸಿತ


ಮಂಜೇಶ್ವರ: ಮಂಗಲ್ಪಾಡಿ ಗ್ರಾಮ ಪಂಚಾಯತ್ ಗೊಳಪಟ್ಟ 2ನೇ ವಾರ್ಡ್ ಉಪ್ಪಳ ಗೇಟ್ ಬಳಿಯ ಉಪ್ಪಳ ಭಗವತೀ ಎಂಬಲ್ಲಿ ಇರುವ ಸರಕಾರಿ ಬಾವಿಯೊಂದು ಕುಸಿದು ಭೂಗರ್ಭಕ್ಕೆ ಸೇರಿಕೊಂಡಿದೆ.

ಈ ಸರಕಾರಿ ಬಾವಿ ಸುಮಾರು 70 ವರ್ಷದ ಹಿಂದಿನದ್ದು ಎಂದು ಪರಿಸರ ನಿವಾಸಿಗಳು ತಿಳಿಸುತ್ತಿದ್ದಾರೆ. ಈ ಬಾವಿಯಲ್ಲಿ ಸುಮಾರು 30 ಅಡಿ ಕೋಲಿನ ನೀರಿದ್ದು, ಪರಿಸರ ನಿವಾಸಿಗಳು ತಮ್ಮ ನಿತ್ಯೋಪಯೋಗಕ್ಕೆ ಬಳಸುತ್ತಿದ್ದರು. ನಿನ್ನೆ ರಾತ್ರಿಯಿಂದ ಮಳೆ ಸುರಿಯುತ್ತಿದ್ದು, ಇಂದು ಬೆಳಗ್ಗೆ ನೋಡಿದಾಗ ಬಾವಿ ಸಂಪೂರ್ಣ ಕುಸಿದು ಭೂಗರ್ಭಕ್ಕೆ ಸೇರಿಕೊಂಡಿದೆ. ಈ ಬಗ್ಗೆ ವಾರ್ಡ್ ಸದಸ್ಯರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article