Manjeswara: ಹೊಂಡಕ್ಕೆ ಪಲ್ಟಿಯಾದ ಶಾಲಾ ಬಸ್-ವಿದ್ಯಾರ್ಥಿಗಳು ಪಾರು
Monday, July 8, 2024
ಮಂಜೇಶ್ವರ: ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಬರುತಿದ್ದ ಶಾಲಾ ಬಸ್ ಜು.8 ರಂದು ಬೆಳಗ್ಗೆ ಹೊಂಡಕ್ಕೆ ಮಗುಚಿ ಬಿದ್ದ ಘಟನೆ ಪುತ್ತಿಗೆ ಗ್ರಾಮ ಪಂಚಾಯತ್ ಗೊಳಪಟ್ಟ ಬಾಡೂರಿನಲ್ಲಿ ನಡೆದಿದೆ.
ಕುನಿಲ್ ಶಾಲೆಯ ಬಸ್ ಇದಾಗಿದ್ದು, ಬಸ್‌ನಲ್ಲಿ ಚಾಲಕ, ಇಬ್ಬರು ವಿದ್ಯಾರ್ಥಿಗಳು ಹಾಗೂ ಓರ್ವ ಸಹಾಯಕಿ ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಅದೃಷ್ಟವಶಾತ್ ಇವರೆಲ್ಲಾ ಯಾವುದೇ ಗಾಯವಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಬಾಡೂರು ಪದವಿನ ಬಳಿ ಅಪಘಾತವುಂಟಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.




