
Shirva: ಪಿಎಚ್‌ಡಿ ಸಾಧಕಿ ಡಾ. ವಾರೀಜಾ ಮೋಹನ್ ಅವರಿಗೆ ಅಭಿನಂದನೆ
Sunday, July 7, 2024
ಶಿರ್ವ: ಉಡುಪಿ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲಿನ ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ವಾರೀಜಾ ಮೋಹನ್ ಇವರು ಮಂಡಿಸಿದ ‘ಜಾಬ್ ಅಟ್ಯಿಟ್ಯೂಡ್ ಅಮಂಗ್ ಔಟ್‌ಸೊರ್ಸಸ್ಡ್ ಎಂಪ್ಲಾಯ್ಸ್ ಇನ್ ಗವರ್ನಮೆಂಟ್ ಡಿಪಾರ್ಟ್‌ಮೆಂಟ್-ಅ ಸ್ಟಡಿ ವಿಥ್ ರೆಫರೆನ್ಸ್ ಟು ಉಡುಪಿ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ’ ಎಂಬ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿ.ವಿ.ಯಿಂದ ಡಾಕ್ಟರೇಟ್ ಪದವಿ ಪಡೆದ ಪ್ರಯುಕ್ತ ಬಂಟಕಲ್ಲು ಎಸ್.ವಿ. ಕನ್ಟ್ರಕ್ಷನ್ಸ್ ಮತ್ತು ಪದಕಣ್ಣಾಯ ಫ್ಯಾಮಿಲಿ ಟ್ರಸ್ಟ್ ಇದರ ವತಿಯಿಂದ ಭಾನುವಾರ ಅಭಿನಂದಿಸಿ ಸನ್ಮಾನಿಸಲಾಯಿತು.
ಬಂಟಕಲ್ಲು ಶ್ರೀಬ್ಬುಸ್ವಾಮಿ ದೈವಸ್ಥಾನದ ಕಾರ್ಯಾಲಯದಲ್ಲಿ ಜರುಗಿದ ಸಮಾರಂಭದಲ್ಲಿ ಕಾಪು ತಾಲೂಕು ಕಸಾಪ ಅಧ್ಯಕ್ಷ ಹಾಗೂ ಶ್ರೀಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಬಿ.ಪುಂಡಲೀಕ ಮರಾಠೆ ಸನ್ಮಾನ ನೆರವೇರಿಸಿ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟಕಲ್ಲು ಶ್ರೀಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ. ಭಾಸ್ಕರ ಶೆಟ್ಟಿ ಸಡಂಬೈಲು ವಹಿಸಿದ್ದರು. ದೈವಸ್ಥಾನದ ಗುರಿಕಾರರೂ, ಬಂಟಕಲ್ಲು ಎಸ್.ವಿ.ಕನ್ಟ್ರಕ್ಷನ್ಸ್ ಮತ್ತು ಪದಕಣ್ಣಾಯ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷರಾದ ಶಂಕರ ಪದಕಣ್ಣಾಯ ಸ್ವಾಗತಿಸಿದರು. ಜೀರ್ಣೊದ್ಧಾರ ಸಮಿತಿಯ ಕಾರ್ಯದರ್ಶಿ ಶಿಕ್ಷಕ ಸತ್ಯಸಾಯಿ ಪ್ರಸಾದ್ ಪ್ರಾಸ್ತಾವಿಕ ಮಾತುಗಳೊಂದಿಗೆ ನಿರೂಪಿಸಿದರು.
ಡಿಡಿಪಿಐ ಕಚೇರಿಯ ನಿವೃತ್ತ ಪ್ರಬಂಧಕರಾದ ಶಾಂತಾ, ಮೋಹನ್ ಸಾಲಿಕೇರಿ, ವಾಸುದೇವ, ದಿನೇಶ್ ಎಸ್, ಬಂಟಕಲ್ಲು ಸಂಜೀವ ವೈ, ದೈವಸ್ಥಾನದ ಅರ್ಚಕರಾದ ಸಂತೋಷ್, ಚಂದ್ರಶೇಖರ್, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಪಾರ್ಥಸಾರಥಿ ಕುಂಜಾರುಗಿರಿ ವಂದಿಸಿದರು.