ಕುಮಾರಧಾರ ನೀರಿನ ಮಟ್ಟ ಇಳಿಕೆ ಶಾಂತವಾದ ನದಿ
Sunday, July 21, 2024
ಸುಬ್ರಹ್ಮಣ್ಯ: ಕಳೆದ ಆರು ದಿನಗಳಿಂದ ಪಶ್ಚಿಮ ಘಟ್ಟ ಭಾಗದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಅಧಿಕ ಪ್ರಮಾಣದ ನೀರು ಕುಮಾರಧಾರ ನದಿಯಲ್ಲಿ ಹರಿದು ಬಂದಿದ್ದು ಕುಮಾರಧಾರ ಸ್ನಾನಘಟ್ಟ ಕಳೆದ ಐದು ದಿನಗಳಿಂದ ನಿರಂತರವಾಗಿ ಮುಳುಗಡೆಯಾಗಿತ್ತು. ಇದೀಗ ನೀರಿನ ಮಟ್ಟ ಇಳಿಕೆಯಾಗುತ್ತಾ ಬಂದಿದೆ.
ಸ್ನಾನಘಟ್ಟದಲ್ಲಿ ಭಕ್ತಾದಿಗಳ ತೀರ್ಥ ಸ್ನಾನಕ್ಕೆ ಇನ್ನೂ ಅವಕಾಶ ಕಲ್ಪಿಸದಿದ್ದರೂ ನೀರಿನ ಡ್ರಮ್‌ಗಳಲ್ಲಿ ನೀರು ಶೇಖರಿಸಿ ತೀರ್ಥ ಸ್ನಾನ ಹಾಗೂ ಪ್ರೋಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಕುಮಾರಧಾರ ಸ್ನಾನಘಟ್ಟದಲ್ಲಿ ನೀರಿಗೆ ಯಾರು ಇಳಿಯದಂತೆ ದೇವಳದ ವತಿಯಿಂದ ಸೆಕ್ಯೂರಿಟಿ ಗಾರ್ಡುಗಳನ್ನು ನೇಮಿಸಿ ಬಂದೋಬಸ್ ವ್ಯವಸ್ಥೆ ಮಾಡಲಾಗಿದೆ.

