ಅಂತಿಬೆಟ್ಟುವಿಗೆ ಮರಿಚಿಕೆಯಾದ ಪಕ್ಕ ರಸ್ತೆ: 150 ಕುಟುಂಬಗಳಿಗೆ ಕಗ್ಗಂಟಾದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ
ಅನೇಕ ವರ್ಷಗಳಿಂದ ಪಕ್ಕ ರಸ್ತೆಯನ್ನೂ ಕಾಣದೆ ಇಂದಿಗೂ ಮಣ್ಣಿನ ರಸ್ತೆಯನ್ನೇ ಆಶ್ರಯಿಸಿ ಅಂತಿಬೆಟ್ಟುವಿನ 150 ಜನತೆ ಪಕ್ಕ ರಸ್ತೆಯ ಕನಸ್ಸು ಮರಿಚಿಕೆಯಾಗಿಯೇ ಉಳಿದೆ.
2021 ರಲ್ಲಿ ಊರಿಗೆ ರಸ್ತೆ ಬರುವ ಆಸೆ ಚಿಗುರೊಡೆದಿದ್ದು, ಕೆಲವೊಬ್ಬರ ರಾಜಕೀಯ ಲಾಭಕ್ಕಾಗಿ ಆ ಚಿಗುರನ್ನು ಚಿವುಟಿದ ಕಾರಣ, ಕೇವಲ ನಾಮಫಲಕದಲ್ಲಿ ಮಾತ್ರ ಅಂತಿಬೆಟ್ಟುಗೆ ರಸ್ತೆಯಾಗಿ 2 ವರ್ಷ ಪೂರೈಸಿದೆ. ಈ ಊರಿನಲ್ಲಿ ಹೆಚ್ಚಿನ ಜನರು ತಮ್ಮ ಹುಟ್ಟಿನಿಂದಲೂ ಇದೇ ಮಣ್ಣಿನ ರಸ್ತೆಯಲ್ಲಿ ಆಟವಾಡಿ ಬೆಳೆದಿದ್ದು, ಇಂದಿನ ಪೀಳಿಗೆಗಾದರೂ ರಸ್ತೆ ಡಂಬಾರೀಕರಣಗೊಳ್ಳುತ್ತದೆ ಎಂದು ಕಂಡಿದ್ದ ಕನಸ್ಸು ಕನಸಾಗಿಯೇ ಉಳಿದುಬಿಟ್ಟಿದೆ.
ಇಲ್ಲಿ 150ಕ್ಕೂ ಹೆಚ್ಚು ಮನೆಗಳಿದ್ದು, ಸುಮಾರು 500ಕ್ಕೂ ಹೆಚ್ಚಿನ ಜನರು ವಾಸಿಸುತ್ತಿದ್ದಾರೆ. ತಮಗೆ ಯಾವುದೇ ಅಗತ್ಯಕ್ಕೆ ಇಲ್ಲಿಯ ಜನರು ಕಡಬ ಅಥವಾ ಸುಬ್ರಹ್ಮಣ್ಯ ಪೇಟೆಯನ್ನು ಆಶ್ರಯಿಸಿದ್ದು, ಈ ಗ್ರಾಮದ ಮಕ್ಕಳು ಕೂಡ ಪ್ರತಿನಿತ್ಯ ಶಾಲೆ ಕಾಲೇಜುಗಳಿಗೆ ಇದೇ ರಸ್ತೆಯಲ್ಲಿ ಸಾಗುವ ಏಕೈಕ ರಸ್ತೆಯಾಗಿದ್ದು, ಕೆಸರು ತುಂಬಿದ ರಸ್ತೆಯಲ್ಲಿ ನಿತ್ಯ ಸಂಚಾರ ಗ್ರಹಚಾರವಾಗಿ ಪರಿಣಮಿಸಿದೆ.
20021 ರ ಜೂನ್ ತಿಂಗಳಲ್ಲಿ 592.49 ಲಕ್ಷ ರೂ. ಮೊತ್ತದಲ್ಲಿ ಪುತ್ತೂರು ತಾಲೂಕಿನ ಐತೂರು, ಕಲ್ಲಾಜೆ, ಅಂತಿಬೆಟ್ಟು, ಬಜಕೆರೆ ಹಾಗೂ ಕೋಡಿಂಬಾಳ ಗ್ರಾಮಗಳಾಗಿ 8.530 ಕಿ.ಮೀ. ಡಾಂಬರು ರಸ್ತೆ, 7.030ಕಿ.ಮೀ. ಕಾಂಕ್ರಿಟ್ ರಸ್ತೆ ಹಾಗೂ 1.500 ಕಿ.ಮೀ. ಮೋರಿಗಳನ್ನು ಸೇರಿಸಿ, 9.530 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಯೋಜನೆ ಸಿದ್ದವಾಗಿದ್ದು, ಈ ಯೋಜನೆಯಲ್ಲಿ ಕೇವಲ 2 ಮೋರಿಗಳು ಮಾತ್ರ ಅಂತಿಬೆಟ್ಟುವಿಗೆ ಬಂದಿದ್ದು, ರಸ್ತೆ ಮಾತ್ರ ಐತೂರು, ಬಜಕೆರೆ ಹಾಗೂ ಕೋಡಿಂಬಾಳ ಗ್ರಾಮವಾಗಿ ಸಾಗಿ ಪೂರ್ಣಗೊಂಡಿದೆ. ಅಂತಿಬೆಟ್ಟು ಹಾಗೂ ಕಲ್ಲಾಜೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ರಸ್ತೆ ಕಾಲೇ ಇರಿಸದೆ ಮುಂದೆ ಸಾಗಿಹೋಗಿದೆ.
ಐತೂರು, ಬಜಕೆರೆ ಹಾಗೂ ಕೋಡಿಂಬಾಳವಾಗಿ ಸಾಗುವ ಈ ರಸ್ತೆಯಲ್ಲಿ ಸೂಮಾರು 5 ಕಿ.ಮೀ.ಗೂ ಹೆಚ್ಚು ಉದ್ದ ಕೇವಲ ರಬ್ಬರ್ ತೋಟ ಬಿಟ್ಟರೆ ಯಾವ ಒಂದು ಮನೆಯೂ ನೋಡಲು ಸಿಗುವುದಿಲ್ಲ. ಇಲ್ಲಿ ಕೆಲ ರಾಜಕೀಯ ವ್ಯಕ್ತಿಗಳ ಸ್ವ ಹಿತಶಕ್ತಿಯಿಂದ ತಮಗೆ ಬೇಕಾದ ಕಡೆಗೆ ರಸ್ತೆಯನ್ನು ಬದಲಾಯಿಸಿಕೊಂಡು ನಮ್ಮ ಗ್ರಾಮದ ಜನತೆಗೆ ಅನ್ಯಾಯ ಮಾಡಿದ್ದಾರೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಮೊದಲಿನಿಂದಲೂ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದು, ನಮ್ಮ ಗ್ರಾಮದಲ್ಲಿ ಹೆಚ್ಚಿನವರು ಕಾಂಗ್ರೆಸ್ ಪಕ್ಷದ ಬೆಂಬಲಿಗರು ಎಂಬ ಕಾರಣಕ್ಕೆ ಈ ಗ್ರಾಮವನ್ನು ಸತತವಾಗಿ ಕಡೆಗಣಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ನೊಂದ ಗ್ರಾಮಸ್ಥರು.
ಪ್ರತೀ ಸಲ ಗ್ರಾಮ ಪಂಚಾಯತ್ ಚುನಾವಣೆಯಿಂದ ಹಿಡಿದು ವಿಧಾನಸಭಾ ಚುನಾವಣೆಯ ವರೆಗೆ ಮತ ಕೋಳಲು ಬರುವಾಗ ಮಾತ್ರ ಈ ಭಾರಿ ನಿಮ್ಮ ಊರಿಗೆ ರಸ್ತೆಯ ವ್ಯವಸ್ಥೆ ಮಾಡಿಸಿಕೊಡುವುದಾಗಿ ಭರವಸೆ ನೀಡುವ ರಾಜಕಾರಣಿಗಳು ಚುನಾವಣೆಯಲ್ಲಿ ಗೆದ್ದ ನಂತರ ತಿರುಗಿಯೂ ನೋಡುವುದಿಲ್ಲ. ಕರೆ ಮಾಡಿರೂ ಕರೆಗೂ ಸ್ಪಂಧಿಸುವುದಿಲ್ಲ.
ಗ್ರಾಮದೊಳಗೆ ಬರಲು ಕೇಳದ ಶಾಲಾ ಬಸ್‌ಗಳು:
ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ನಮ್ಮ ಮಕ್ಕಳನ್ನು ಶಾಲೆಗೆ ಬಿಡಲು ಮತ್ತು ಮಕ್ಕಳನ್ನು ಕರೆದುಕೊಂಡು ಬರಲು ಡಾಂಬರು ರಸ್ತೆಯ ತನಕ ಹೋಗಬೇಕು. ನಮ್ಮ ಊರಿನ ಒಳಗೆ ಶಾಲೆಯ ಬಸ್‌ಗಳು ಬರುವುದಿಲ್ಲ. ಪ್ರತಿನಿತ್ಯ ಮಕ್ಕಳನ್ನು ಜಾಗೃತೆಯಲ್ಲಿ ಜಾರಿ ಬೀಳುವ ಭಿತಿಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗಿ ಮಕ್ಕಳನ್ನು ಬಸ್‌ಗೆ ಬಿಟ್ಟು ಬರಬೇಕು. ಬಸ್‌ಗೆ ಹಣ ಪಾವತಿಸಿದರೂ ಗ್ರಾಮಗೊಳಗೆ ಬರಲು ಕೋಳುವುದಿಲ್ಲ. ಅಂತಿಬೆಟ್ಟುವಿನ ನೊಂದ ಮಹಿಳೆ.
ಮಕ್ಕಳು-ವೃದ್ಧರನ್ನು ಆಸ್ಪತ್ರೆಗೆ ಸಾಗಿಸಲು ಅರಸಾಹಸ:
ನಮ್ಮ ಗ್ರಾಮದಲ್ಲಿ ಮಕ್ಕಳು, ಮಹಿಳೆಯರು, ವೃದ್ಧರಿಗೆ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದೇ ಕಷ್ಟವಾಗುತ್ತದೆ. ಯಾರ ಮನೆಯಲ್ಲಿ ವಾಹನಗಳಿವೆ ಅವರುಗಳು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ, ವಾಹನಗಳಿಲ್ಲದವರು ವಾಹನಗಳಿರು ಮನೆಗಳ ಸಹಾಯ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಅಂತಿಬೆಟ್ಟುವಿನ ನೊಂದ ಗ್ರಾಮಸ್ಥರು.



.jpg)

