Udupi: ಸಂಸದ ಕೋಟ ನೆರೆ ಹಾನಿ ವೀಕ್ಷಣೆ

Udupi: ಸಂಸದ ಕೋಟ ನೆರೆ ಹಾನಿ ವೀಕ್ಷಣೆ


ಉಡುಪಿ: ಜಿಲ್ಲೆಯಾದ್ಯಂತ ಅದರಲ್ಲೂ ಹೆಬ್ರಿ, ಕುಂದಾಪುರ, ಬೈಂದೂರು ಮತ್ತು ಹೆಬ್ರಿ ತಾಲೂಕುಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಬನ್ನಾಡಿ, ಅಚ್ಲಾಡಿ, ಕಾವಡಿ, ಕುದ್ರೆಬೆಟ್ಟು, ವಡ್ಡರ್ಸೆ ಮೊದಲಾದ ನೆರೆ ಪೀಡಿತ ಪ್ರದೇಶಗಳಿಗೆ ಮಂಗಳವಾರ ಜಿಲ್ಲಾಧಿಕಾರಿ ಜೊತೆ ಭೇಟಿ ನೀಡಿ, ನೆರೆ ಹಾನಿ ವೀಕ್ಷಿಸಿದರು.

ಕೆಲವು ಗ್ರಾಮಗಳಲ್ಲಿ ರಸ್ತೆ ಸಂಪರ್ಕದ ಕೊರತೆಯಿಂದ ನೆರೆಯಿಂದ ಪಾರಾಗಲು ದೋಣಿ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದರು.

ಕೆಲವು ಪ್ರದೇಶಗಳಲ್ಲಿ ವಿಪರೀತ ಮಳೆಯ ಕಾರಣದಿಂದಾಗಿ ನೆರೆ ಪರಿಸ್ಥಿತಿ ಉಂಟಾಗಿದ್ದು, ಜನರ ಸಂರಕ್ಷಣೆಗೆ ಅಗತ್ಯವಿದ್ದ ಕಡೆಗಳಲ್ಲಿ ದೋಣಿ ಒದಗಿಸಲು ಮತ್ತು ತುರ್ತಾಗಿ ಕಾಳಜಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿಗೆ ಸೂಚಿಸಿದರು.

ವಿಧಾನ ಸಭೆ ಅಧಿವೇಶನದಲ್ಲಿರುವ ಜಿಲ್ಲೆಯ ಶಾಸಕರೂ ಸಾರ್ವಜನಿಕರು ಮತ್ತು ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ ಎಂದು ಸಂಸದ ಕೋಟ ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಕುಂದಾಪುರ ಸಹಾಯಕ ಕಮಿಷನರ್ ರಶ್ಮಿ ಎಸ್. ಆರ್., ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್, ವಿಎ ರಾಘವೇಂದ್ರ, ವಡ್ಡರ್ಸೆ ಪಂಚಾಯತ್ ಅಧ್ಯಕ್ಷ ಲೋಕೇಶ್, ಪಂಚಾಯತ್ ಸದಸ್ಯರಾದ ಕೋಟಿ ಪೂಜಾರಿ, ಹರೀಶ್ ಶೆಟ್ಟಿ, ತೀರ್ಥನ್ ದೇವಾಡಿಗ, ಭಾಸ್ಕರ್ ಪೂಜಾರಿ, ರಮ್ಯಾ, ಚಂದ್ರಶೇಖರ್ ಶೆಟ್ಟಿ ಮೊದಲಾದವರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article