
Udupi: ಮನೆ ಮೇಲೆ ಮಣ್ಣು ಬಿದ್ದು ಮಹಿಳೆ ಮೃತ್ಯು
Thursday, July 4, 2024
ಉಡುಪಿ: ಭಾರೀ ಮಳೆ ಹಿನ್ನೆಲೆಯಲ್ಲಿ ಮನೆ ಮೇಲೆ ಮಣ್ಣು ಕುಸಿದು ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಕೊಲ್ಲೂರು ಸಮೀಪ ಗುರುವಾರ ಸಂಭವಿಸಿದೆ. ಮೃತ ಮಹಿಳೆಯನ್ನು ಅಂಬಾ ಎಂದು ಗುರುತಿಸಲಾಗಿದೆ.
ಗುಡ್ಡೆ ತಪ್ಪಲಿನ ಹಳ್ಳಿಬೇರು ದಳಿ ಎಂಬಲ್ಲಿ ಘಟನೆ ನಡೆದಿದ್ದು. ನಿರಂತರ ಮಳೆಯಿಂದಾಗಿ ಸಡಿಲಗೊಂಡ ಗುಡ್ಡೆಯ ಮಣ್ಣು ಮನೆ ಮೇಲೆ ಬಿದ್ದ ಪರಿಣಾಮ ಮಣ್ಣಿನ ರಾಶಿಯಡಿ ಸಿಲುಕಿದ ಕೂಲಿ ಕಾರ್ಮಿಕೆ ಅಂಬಾ ಸಾವನ್ನಪ್ಪಿದರು. ಕೊಲ್ಲೂರು ಠಾಣೆಯಲ್ಲಿ ಕೇಸು ದಾಖಲಾಗಿದೆ.